ರಾಣಿಪುರದಲ್ಲಿ ಅಪಘಾತ, ಹತ್ತು ಮಂದಿಗೆ ಗಾಯ

accident-15
Published on

ಕಾಸರಗೋಡು: ಪಾಣತ್ತೂರು ಮೈಲಾಡಿ ರಸ್ತೆಯ ಕಂಬಿಕಾನದಲ್ಲಿ ಕಾರು ಮತ್ತು ಜೀಪ್ ಡಿಕ್ಕಿಯಾಗಿ ವಿದ್ಯಾರ್ಥಿಗಳು ಸೇರಿ ಹತ್ತು ಮಂದಿ ಗಾಯಗೊಂಡಿದ್ದಾರೆ. ರಾಣಿಪುರ ಪ್ರವಾಸಿ ಕೇಂದ್ರ ಸಂದರ್ಶಿಸಿ ವಾಪಸಾಗುತ್ತಿದ್ದ ಕಾರು ಮತ್ತು ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಜೀಪು ಡಿಕ್ಕಿಯಾಗಿದೆ. ಜೀಪಿನಲ್ಲಿದ್ದ ಪಾಣತ್ತೂರಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಾದ ಶಿವ ಕುಮಾರ್, ಗೀತು, ಅರ್ಜುನ್, ಆದಿದೇವ್, ಅರ್ಯ, ಶಿವನ್ಯಾ, ಲಯ, ಅಮೃತ್ ಹಾಗೂ ಕಾರು ಪ್ರಯಾಣಿಕರಾದ ಪುತ್ತೂರಿನ ಅಸ್ವಾಫ್ ಹಾಗೂ ನುಹ್‌ಮನ್ ಗಾಯಗೊಂಡಿದ್ದು, ಪೂಡಂಗಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net