ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿಯಾಗಿ ದಂಪತಿಯ ದಾರುಣ ಸಾವು,ಪವಾಡ ಸದೃಶವಾಗಿ ಪಾರಾದ 4 ತಿಂಗಳ ಹಸುಗೂಸು!

Accident
Published on

ಹೊಸೂರು: ರಾಜ್ಯದ ಗಡಿಭಾಗ ತಮಿಳುನಾಡಿನ ಹೊಸೂರಿನಲ್ಲಿ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯಾಗಿ ದ್ವಿಚಕ್ರವಾಹನದಲ್ಲಿದ್ದ ದಂಪತಿ ಸಾವನ್ನಪ್ಪಿದ್ದು, ನಾಲ್ಕು ತಿಂಗಳ ಮಗು ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದೆ.

ಅನ್ಬು, ಸರಿತಾ ಅಪಘಾತದಲ್ಲಿ ಮೃತ ಪಟ್ಟ ದಂಪತಿಗಳು. ಲಾರಿ ಚಾಲಕರ ಅಜಾಗರೂಕತೆಯಿಂದಾಗಿ ಈ ಅಪಘಾತ ನಡೆದಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೆದ್ದಾರಿಯಲ್ಲಿ ಏಕಾಏಕಿ ಯುಟರ್ನ್ ತೆಗೆದುಕೊಳ್ಳಲು ಮುಂದಾದ ಟ್ಯಾಂಕರ್​ ಚಾಲಕ ದ್ವಿಚಕ್ರ ವಾಹನ ಬರುತ್ತಿರುವುದನ್ನೂ ಲೆಕ್ಕಿಸದೇ ಡಿ್ಕಕಿ ಹೊಡೆದಿದ್ದರಿಂದ ಈ ಅನಾಹುತ ಸಂಭವಿಸಿದೆ.

4 ತಿಂಗಳ ಮಗುವಿನ‌ ಜೊತೆ ಬೈಕ್ ನಲ್ಲಿ ಊರಿಗೆ ಹೊರಟಿದ್ದ ದಂಪತಿ ಮಸಣ ಸೇರಿದ್ದು ದುರದೃಷ್ಟವೇ ಸರಿ. ಸಣ್ಣ ಪುಟ್ಟ ಗಾಯಗಳಾಗಿದ್ದ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net