ಅಪಘಾತದಲ್ಲಿ ಗ್ರಾಪಂ ಸದಸ್ಯ ಸಾವು

bike_Bike Accident_2
Published on

ಖಾನಾಪುರ: ಬೈಕ್‌ಗೆ ಹಿಂದಿನಿಂದ ಕಾರ್ ಡಿಕ್ಕಿ ಹೊಡೆದು ಗ್ರಾಪಂ ಸದಸ್ಯ ಸ್ಥಳದಲ್ಲೇ ಮೃತಪಟ್ಟು, ಹಿಂಬಂದಿ ಸವಾರ ಗಾಯಗೊಂಡ ಘಟನೆ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳಿ ಸೇತುವೆ ಮೇಲೆ ಸೋಮವಾರ ಸಂಜೆ ಸಂಭವಿಸಿದೆ.

ತಾಲೂಕಿನ ಕೌಂದಲ ಗ್ರಾಮದ ಗ್ರಾಪಂ ಸದಸ್ಯ ಉದಯ ನಾರಾಯಣ ಭೋಸಲೆ (42) ಮೃತ. ಹಿಂಬದಿ ಸವಾರ ಕರಂಬಲ್ ಗ್ರಾಮದ ಸೈನಿಕ ಪ್ರಶಾಂತ ಪಾಟೀಲ ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾನಾಪುರದಿಂದ ಬೆಳಗಾವಿಗೆ ಕೆಲಸದ ನಿಮಿತ್ತ ಬೈಕ್ ಮೇಲೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಶಾಸಕ ವಿಠ್ಠಲ ಹಲಗೇಕರ, ಪ್ರಮೋದ ಕೋಚೇರಿ, ಗುಂಡು ತೋಪಿನಕಟ್ಟಿ, ಮಲ್ಲಪ್ಪ ಮಾರಿಹಾಳ, ರಾಜು ಸಿದ್ದಣ್ಣಿ, ಭರಮಣಿ ಪಾಟೀಲ್, ಕಾಂಗ್ರೆಸ್ ಮುಖಂಡ ಸುರೇಶ ಜಾಧವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಘಾಡಿ, ಪತ್ರಕರ್ತ ವಾಸುದೇವ ಚೌಗುಲೆ ಇತರರು ಆಗಮಿಸಿದ್ದರು. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net