ಆಸ್ಪತ್ರೆಗೆ ಹೊರಟಿದ್ದವರಿಗೆ ಆ್ಯಕ್ಸಿಡೆಂಟ್

16 tth 01
ಮೇಗರವಳ್ಳಿ ಸಮೀಪ ಅಪಘಾತದಲ್ಲಿ ಜಖಂಗೊಂಡ ಕಾರು.
Published on

ತೀರ್ಥಹಳ್ಳಿ: ತಾಲೂಕಿನ ಮೇಗರವಳ್ಳಿ ಸಮೀಪದ ಕೊಳಿಗೆ ಬಳಿ ಸೋಮವಾರ ಬೆಳಗ್ಗೆ ಖಾಸಗಿ ಬಸ್ ಮತ್ತು ಕಾರಿನ ಡಿಕ್ಕಿಯಾಗಿ ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ. ಹಾಲಾಡಿಯ ಕುಟುಂಬ ಶಿವಮೊಗ್ಗ ಆಸ್ಪತ್ರೆಗೆ ಕಾರಿನಲ್ಲಿ ಹೋಗುತ್ತಿರುವಾಗ ತೀರ್ಥಹಳ್ಳಿಯಿಂದ ಬಿದಿರುಗೋಡು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಕಾರು ಮುಖಾಮುಖಿಯಾಗಿವೆ. ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net