

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಬಡಚಿ ಗ್ರಾಮದ ಹೊರವಲಯದ ಸಂಕೇಶ್ವರ&ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಸರ್ಕಾರಿ ಬಸ್ ಹಾಗೂ ಕಾರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಟನೆ ಸೋಮವಾರ ಸಂಭವಿಸಿದೆ.
ವಿಜಯಪುರ ಜಿಲ್ಲೆಯ ರಿಯಾಜ ಇನಾಮದಾರ (47) ಮತ ವ್ಯಕ್ತಿ. ಇವರ ಪತ್ನಿ ಸಾನಿಯಾ ಇನಾಮದಾರ (38) ಹಾಗೂ ಮಗ ಸಿದ್ದಿಕ ಇನಾಮದಾರ ಗಾಯಗೊಂಡವರು. ಈ ಕುಟುಂಬ ಕಾರ್ನಲ್ಲಿ ವಿಜಯಪುರ ಕಡೆಯಿಂದ ಬಡಚಿ ಮಾರ್ಗವಾಗಿ ಅಥಣಿ ಕಡೆಗೆ ಸಾಗುವ ವೇಳೆ ಅಥಣಿ ಕಡೆಯಿಂದ ವಿಜಯಪುರಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ನಡುವೆ ಡಿಕ್ಕಿಯಾಗಿ ದುರ್ಟನೆ ಸಂಭವಿಸಿದೆ. ಈ ವೇಳೆ ಗಂಭೀರ ಗಾಯಗೊಂಡ ಮೂವರನ್ನು ಅಥಣಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ರವಾನಿಸುವ ವೇಳೆ ರಿಯಾಜ ಮಾರ್ಗ ಮಧ್ಯೆ ಮತಪಟ್ಟಿದ್ದು, ಸಾನಿಯಾ ಹಾಗೂ ಸಿದ್ದಿಕ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಮಹಾರಾಷ್ಟ್ರದ ಮಿರಜ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ರಜೆ ಮೇಲೆ ಬಂದಿದ್ದ ಯೋಧ
ಮುಂಬೈನ ರಾಂಚಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧ ರಿಯಾಜ್ ರಜೆ ಮೇಲೆ ಒಂದು ತಿಂಗಳ ಹಿಂದೆ ರಜೆ ಮೇಲೆ ವಿಜಯಪುರಕ್ಕೆ ಬಂದಿದ್ದ. ಏ.24ರಂದು ಮರಳಿ ಹೋಗಲು ವಿಮಾನ ಬುಕ್ ಸಹಿತ ಮಾಡಿದ್ದರು. ಆದರೆ, ಸಂಬಂಧಿರನ್ನು ಭೇಟಿಯಾಗಬೇಕು ಎಂದು ಸೋಮವಾರ ಅಥಣಿಗೆ ಬರುವಾಗ ಈ ಅವಡ ಸಂಭವಿಸಿದೆ. 21 ವರ್ಷಗಳಿಂದ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದ ರಿಯಾಜ್ ಸೇವಾ ಅವಧಿ ಇನ್ನೂ 3 ವರ್ಷ ಮಾತ್ರ ಉಳಿದಿತ್ತು.
ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಐಗಳಿ ಪೊಲೀಸ್ ಠಾಣೆಯ ಅಪರಾಧವಿಭಾಗ ಪಿಎಸ್ಐ ಕುಮಾರ ಹಾಡಕರ, ತನಿಖಾಸಹಾಯಕ ಪ್ರಕಾಶ ಕುರಿ, ಸಿಬ್ಬಂದಿಗಳಾದ ಸಂಜು ಸನಗೊಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.