

ಹೊಸಪೇಟೆ: ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಕಮಲಾಪುರ ಹಾಗೂ ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಿಕೇರಿ ಗ್ರಾಮದ ಪ್ರದೀಪ್ (22),
ತಾಲೂಕಿನ ಗುಂಡು ಗ್ರಾಮದ ಎ.ಕೊಟ್ರೇಶ್ (25) ಮೃತ ದುರ್ಧೈವಿಗಳು.
ತಾಲೂಕಿನ ಬುಕ್ಕಸಾಗರದ ಬಳಿ ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಪ್ರದೀಪ್ ಹಾಗೂ ಹಿಂಬದಿ ಸವಾರ ಸಿದ್ದಪ್ಪ ಭಾರಿ ಗಾಯಗಳಾಗಿವೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಎಸ್.ಎಲ್.ಆರ್. ಕಾರ್ಖಾನೆ ಬಳಿ ಎ.ಕೊಟ್ರೇಶ್ ಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಚಕ್ರ ಎದೆಯ ಮೇಲೆ ಹತ್ತಿ ಇಳಿದಿದೆ. ಚಿಕಿತ್ಸೆಗೆಂದು ಅಂಬುಲೆನ್ಸ್ ಹೋಗುತ್ತಿರುವಾಗ ರಸ್ತೆ ಮಧ್ಯ ಮೃತಪಟ್ಟಿದ್ದಾರೆ ಎಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.