ಜಾನುವಾರು ಸಾಗಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿ

13spt5
ಸೋಮವಾರಪೇಟೆ ಸಮೀಪದ ಕಾಗಡೀಕಟ್ಟೆ ಸಮೀಪ ದನಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗಿ ಜಖಂ ಗೊಂಡಿರುವುದು.
Published on

ಸೋಮವಾರಪೇಟೆ: ಕಾಗಡಿಕಟ್ಟೆ ಜಂಕ್ಷನ್‌ನ ತಿರುವಿನಲ್ಲಿ ಸೋಮವಾರ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗಿದೆ.

ಗೂಡ್ಸ್ ವಾಹನದಲ್ಲಿದ್ದ ಮೂರು ಜಾನುವಾರುಗಳು ಗಾಯಗೊಂಡಿವೆ. ಅರೋಪಿಗಳಾದ ಅರಕಲಗೂಡು ತಾಲೂಕಿನ ಹೊಳಲುಗೋಡು ಗ್ರಾಮದ ಚಾಲಕ ಅಲ್‌ಮಸ್ ಖಾನ್, ಸಯ್ಯದ್ ಗಪೂರ್, ಗೂಡ್ಸ್ ವಾಹನಕ್ಕೆ ಬೆಂಗಾವಲು ವಾಹನದ ಚಾಲಕ ದಿಲ್ನ್‌ವಾಜ್ ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಬೆಳಗ್ಗಿ ಜಾವ ಚಾಲಕನ ಅಜಾಗರೂಕತೆಯಿಂದ ತಿರುವಿನಲ್ಲಿ ಗೂಡ್ಸ್ ವಾಹನ ಪಲ್ಟಿಯಾಗಿ ಜಖಂಗೊಂಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ. ಜಾನುವಾರುಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net