ಕಾರು ಡಿಕ್ಕಿಯಾಗಿ ಮಗು ಸಾವು

accident
Published on

ಮೂಡುಬಿದಿರೆ: ತೋಡಾರು ಸಮೀಪದ ಹಂಡೇಲಿನಲ್ಲಿ ಸೋಮವಾರ ರಸ್ತೆ ದಾಟುತ್ತಿದ್ದ 5ರ ಹರೆಯದ ಮಗುವಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಮಗು ಸಾವನಪ್ಪಿದೆ.

ಹಂಡೇಲಿನ ಅಬುಸ್ವಾಲಿಹ್ ಅವರ ಪುತ್ರಿ ಆಜ್ಮಾ ಫಾತಿಮಾ(5) ಮೃತಪಟ್ಟ ಮಗು. ಅಬುಸ್ವಾಲಿಹ್ ಅವರು ವಿದೇಶದಲ್ಲಿದ್ದು, ಇವರ ಅವಳಿ ಜವಳಿ ಹೆಣ್ಣು ಮಕ್ಕಳನ್ನು ಅಜ್ಜ ಹತ್ತಿರದ ಅಂಗಡಿಗೆ ಕರೆದುಕೊಂಡು ಹೋಗಿದ್ದರು. ಇಬ್ಬರು ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡು ವಾಪಾಸು ಮನೆಗೆ ಕರೆದುಕೊಂಡು ಬರುತ್ತಿದ್ದಾಗ ದೇವಿನಗರ ಕ್ರಾಸ್ ಬಳಿ ಆಜ್ಮಾ ಅಜ್ಜನ ಕೈಬಿಡಿಸಿಕೊಂಡು ನಿಧಾನವಾಗಿ ಓಡುತ್ತಾ ರಸ್ತೆ ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಬಂದ ಕಾರು ಮಗುವಿಗೆ ಡಿಕ್ಕಿ ಹೊಡೆಯಿತೆನ್ನಲಾಗಿದೆ.

ಗಂಭೀರ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದೆ. ಕಾರು ಚಾಲಕನ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net