

ರಾಯಚೂರು: ಕೇಂದ್ರ ಹೊಸದಾಗಿ ಜಾರಿಗೊಳಿಸಲು ಮುಂದಾಗಿರುವ ಅಪಘಾತ ನಿಯಂತ್ರಣ ಕಾಯ್ದೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಪ್ರಸ್ತಾವಿತ ಕಾಯ್ದೆ ಸಾಕಷ್ಟು ನ್ಯೂನ್ಯತೆಗಳಿಂದ ಕೂಡಿದ್ದು, ವಾಹನ ಚಾಲಕರಿಗೆ ಮಾರಕವಾಗಿದೆ. ಕಾರಣ ಕಾಯ್ದೆ ಜಾರಿಯನ್ನು ಮರುಪರಿಶೀಲನೆ ನಡೆಸಲು ಬೇಕು ಎಂದು ಒತ್ತಾಯಿಸಿದರು.
ಹಿಟ್ ಆ್ಯಂಡ್ ರನ್ ಘಟನೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಕಾಯ್ದೆ ಜಾರಿಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದ್ದು, ಪ್ರಕರಣದ ತುರ್ತು ಮರುಪರಿಶೀಲನೆ ಅಗತ್ಯವಿರುವ ಪ್ರಸ್ತಾಪಿತ ಕಾನೂನಿನಲ್ಲಿ ಗಮನಾರ್ಹ ಲೋಪದೋಷಗಳಿವೆ.
ಉದ್ದೇಶಿತ ಕಾನೂನನ್ನು ಸಾರಿಗೆ ವಲಯದ ಪ್ರತಿನಿಗಳೊಂದಿಗೆ ಸಮಾಲೋಚನೆ ನಡೆಸದೇ ಪರಿಚಯಿಸಲು ಮುಂದಾಗಲಿದ್ದು, ಕಾಯ್ದೆ ಅನುಷ್ಠಾನದ ಸಮಯದಲ್ಲಿ ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಸೈಯದ್ ಹುಸೇನ್, ಉಪಾಧ್ಯಕ್ಷ ಮಹ್ಮದ್ ಅಜರುದ್ದೀನ್, ಪದಾಕಾರಿಗಳಾದ ತೌಫಿಕ್ ಹುಸೇನ್, ಮಹ್ಮದ್ ಖುತುಬುದ್ದೀನ್, ಸೈಯದ್ ಶರ್ೀ, ಬ್ರಿಜ್ಜೇಶ್ ಪಾಟೀಲ್, ಸೈಯದ್ ನೂರುದ್ದೀನ್ ಪಾಲ್ಗೊಂಡಿದ್ದರು.