ಅಪಘಾತ ಪ್ರಕರಣ ಸಾಬೀತು 6 ತಿಂಗಳು ಸಜೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ನಗರ ಬೈಕಂಪಾಡಿಯಲ್ಲಿ ಸ್ಕೂಟರ್‌ಗೆ ಟ್ಯಾಂಕರ್ ಡಿಕ್ಕಿಯಾದ ಪ್ರಕರಣದ ಆರೋಪ ಜೆಎಂಎ್ಸಿ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆಪರಾಧಿಗೆ 6 ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದೆ.


ಪ್ರವೀಣ್ ವಸೂತಿ ಶಿಕ್ಷೆಗೊಳಗಾದ ಅಪರಾಧಿ.


ಪ್ರಕರಣದ ಹಿನ್ನೆಲೆ: ಉಜಿರೆ ಕುಳೂರು ಅಬ್ದುಲ್ ರಹೀಂ ಎಂಬವರು 2021ರ ನ.11ರಂದು ಬೆಳಗ್ಗೆ 9.20ರ ವೇಳೆಗೆ ತನ್ನ ಸ್ಕೂಟರ್‌ನಲ್ಲಿ ಪಣಂಬೂರು ಜಂಕ್ಷನ್ ಕಡೆಯಿಂದ ಬೈಕಂಪಾಡಿ ಕಡೆಗೆ ತೆರಳುತ್ತಿದ್ದಾಗ ಜೋಕಟ್ಟೆಯ ಸಮೀಪ ತಲುಪುತ್ತಿದ್ದಂತೆ, ಪಣಂಬೂರು ಜಂಕ್ಷನ್ ಕಡೆಯಿಂದ ಬೈಕಂಪಾಡಿ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ವಾಹನವನ್ನು ಅದರ ಚಾಲಕ ಪ್ರವೀಣ್ ಮಸೂತಿ ದುಡುಕು ಹಾಗೂ ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರೀಣಾಮ ರಹೀಂ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದರು. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ ಪರೀಕ್ಷಿಸಿದ ವೈದ್ಯರು ರಹೀಂ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ನ್ಯಾಯಾಲಯವು ಸಾಕ್ಷಿ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಅಪರಾಧಿಗೆ 6 ತಿಂಗಳ ಕಾಲ ಸಾದಾ ಶಿಕ್ಷೆ ಹಾಗೂ ರೂ.6ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತದೆ. ದಂಡ ತೆರಲು ತಪ್ಪಿದಲ್ಲಿ 3 ತಿಂಗಳು 10 ದಿನಗಳ ಕಾಲ ಸಾಧಾ ಶಿಕ್ಷೆ ವಿಧಿಸಿ ನ್ಯಾಯಾಧೀಶೆಯಾದ ಅಂಜಲಿ ಶರ್ಮಾರವರು ತೀರ್ಪು ನೀಡಿರುತ್ತಾರೆ. ಮೊಹಮ್ಮದ್ ಷರ್ೀ ಪ್ರಕರಣವನ್ನು ದಾಖಲಿಸಿ ಜೆಎಂಎ್ಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾ ರೈ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net