ರಸ್ತೆ ಅಪಘಾತದಲ್ಲಿ ಯುವಕ ಸಾವು

accident boy death kukanoor koppal road tipper
MANJUNATH
Published on

ಕುಕನೂರು(ಕೊಪ್ಪಳ):ತಾಲೂಕಿನ ರಾಜೂರು ಗ್ರಾಮದ ಬೈ ಪಾಸ್ ರಸ್ತೆ ತಿರುವಿನಲ್ಲಿ ಕುಕನೂರು ಪಟ್ಟಣದ ಯುವಕ ಮಂಜುನಾಥ ಭೀಕ್ಷಾವತೀಮಠ(32) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಜರುಗಿದೆ.

ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ. ಬೈಕ್ ಚಲಾಯಿಸಿಕೊಂಡು ಕುಕನೂರು ಕಡೆ ಬರುತ್ತಿದ್ದ ಬೈಕ್ ಸವಾರ ಮಂಜುನಾಥ ಭೀಕ್ಷಾವತೀಮಠಗೆ ಟಿಪ್ಪರ್ ಗುದ್ದಿದ ಕಾರಣ ಗಂಭೀರ ಗಾಯಗಳಾಗಿದ್ದವು.

ನಂತರ ಚಿಕಿತ್ಸೆಗೆಂದು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಟಿಪ್ಪರ್ ಲಾರಿ ವಿರುದ್ಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net