ಅಪಘಾತದಲ್ಲಿ ಬೈಕ್ ಸವಾರ ಸಾವು

accident
Published on

ಬೈಲಹೊಂಗಲ: ಸಮೀಪದ ಬೈಲವಾಡ ಕ್ರಾಸ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಾಗನೂರ ಗ್ರಾಮದ ಬೈಕ್ ಸವಾರ ವೀರನಗೌಡ (ಶ್ರೀಧರ) ಮಹಾಂತೇಶ ಶಿವನಾಯ್ಕರ (32) ಸ್ಥಳದಲ್ಲೇ ಮೃತಪಟ್ಟಿದ್ದು, ಅದೇ ಗ್ರಾಮದ ಗುರುನಾಯ್ಕ ರುದ್ರನಾಯ್ಕ ಇಂಚಲ (32), ಸಿದ್ರಾಮ ಸೋಮಪ್ಪ ಹುಕ್ಕೇರಿ (30) ಗಾಯಗೊಂಡಿದ್ದಾರೆ. ರಸ್ತೆ ಬದಿ ನಿಂತ್ದಿ ಟ್ರಾೃಕ್ಟರ್ ಟ್ರಾಲಿಗೆ ನಾಗನೂರ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಡಿಕ್ಕಿಯಾಗಿದೆ.

ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net