ಮೂರು ವಾಹನಗಳ ಮಧ್ಯೆ ಅಪಘಾತ, ಬೈಕ್ ಸವಾರ ಸಾವು

Accident between three vehicles, biker dies
ಅಪಘಾತ ಸ್ಥಳದಲ್ಲಿ ಶಾಸಕ ಜೆ.ಟಿ. ಪಾಟೀಲ
Published on

ಕಲಾದಗಿ, ಸಮೀಪದ ಆನದಿನ್ನಿ ಕ್ರಾಸ್ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದ ಮೂರು ವಾಹನಗಳ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು ಇನ್ನೊಬ್ಬ ಗಾಯಗೊಂಡಿದ್ದಾನೆ.

ಗದ್ದನಕೇರಿ ಕ್ರಾಸ್ ಕಡೆಯಿಂದ ಬೀಳಗಿಗೆ ಬೈಕ್‌ನಲ್ಲಿ ಹೊರಟಿದ್ದ ಮರಿಚಿಕ್ಕಲಕಿ ಗ್ರಾಮದ ಭೀಮಣ್ಣ ಬಡಿಗೇರ(45) ಮೃತಪಟ್ಟವರು. ಹಿಂಬದಿ ಸವಾರ ವಿಠ್ಠಲ ಸಳಕೆ ಗಾಯಗೊಂಡವರು.

ಬೀಳಗಿ ಕಡೆಗೆ ಹೊರಟಿದ್ದ ಲಾರಿ ಓವರ್‌ಟೇಕ್ ಮಾಡುತ್ತಿದ್ದ ಬೈಕ್ ಸವಾರನಿಗೆ ಎದುರಿಗೆ ಬಂದ ಕಾರು, ನಂತರ ಲಾರಿಗೆ ಬಡಿದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಕಲಾದಗಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ನೂರಜಾನ್ ಸಾಬರ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಮಾನವೀಯತೆ ಮೆರೆದ ಶಾಸಕ

ಅಪಘಾತ ಸಂಭವಿಸಿದ ಕೆಲ ಹೊತ್ತಿನಲ್ಲೇ ಬೀಳಗಿ ಕಡೆಗೆ ಹೊರಟಿದ್ದ ಶಾಸಕ ಜೆ.ಟಿ. ಪಾಟೀಲ ಅಪಘಾತ ಕಂಡು ಕಾರಿನಿಂದ ಕೆಳಗಿಳಿದಿದ್ದಾರೆ. ಅದೇ ಕ್ಷಣದಲ್ಲಿ ಪೊಲೀಸರಿಗೆ ಹಾಗೂ 108 ಆಂಬುಲೆನ್ಸ್ ವಾಹನಕ್ಕೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net