ಬಿಆರ್‌ಟಿಎಸ್ ಚಿಗರಿ- ಆಟೋ ಮಧ್ಯೆ ಅಪಘಾತ

Accident
Published on

ಧಾರವಾಡ: ಹುಬ್ಬಳ್ಳಿ- ಧಾರವಾಡ ನಡುವಿನ ಸಂಜೀವಿನ ಪಾರ್ಕ್ ಬಿಆರ್‌ಟಿಎಸ್ ಚಿಗರಿ ಬಸ್ ಹಾಗೂ ಆಟೋ ಮಧ್ಯೆ ಶನಿವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಸಿಗ್ನಲ್ ರಸ್ತೆ ಕ್ರಾಸಿಂಗ್ ವೇಳೆ ಚಿಗರಿ ಬಸ್, ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಪಾರಾಗಿದ್ದಾನೆ. ಅಪಘಾತ ಸಂಭವಿಸಿದ ನಂತರ ಇಬ್ಬರೂ ಚಾಲಕರ ಮಧ್ಯೆ ಜಗಳ ನಡೆದಿದೆ. ಆಟೋ ಹಾಗೂ ಇತರ ವಾಹನಗಳ ಸಂಘಟನೆಗಳ ಚಾಲಕರು ಮತ್ತು ಸ್ಥಳೀಯರು ಜಮಾವಣೆಯಾಗಿ ಬಿಆರ್‌ಟಿಎಸ್ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಇದರಿಂದ ಗಂಟೆಗಟ್ಟಲೇ ವಾಹನ ಸಂಚಾರ ಬಂದ್ ಆಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net