ಗೊಬ್ಬುರ ಬಳಿ ಸರಣಿ ಅಪಘಾತ: ಮೂವರ ಸಾವು

TT
Published on

ಕಲಬುರಗಿ: ಟೆಂಪೋ ಟ್ರಾವೆಲರ್ ಟೈಯರ್ ಬ್ಲಾಸ್ಟ್ನಿಂದ ಸರಣಿ ಅಪಘಾತ ಸಂಭವಿಸಿ ಟೆಂಪೋ ಟ್ರಾವೆಲರ್‌ನಲ್ಲಿದ್ದ ಇಬ್ಬರು, ಓರ್ವ ಬೈಕ್ ಸವಾರ ಸೇರಿ ಮೂವರು ಮೃತಪಟ್ಟ ಘಟನೆ ಅಫಜಲಪುರ ತಾಲೂಕಿನ ಗೊಬ್ಬುರ ಬಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಟೆಂಪೋ ಟ್ರಾವೆಲರ್, ಕಬ್ಬಿನ ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿದೆ.

ವಿನೂತಾ ಕಲಬುರಗಿ (೫೪), ಅನೂಪ ಮಾಧವ (೨೯), ಬಸವರಾಜ (೩೩) ಮೃತಪಟ್ಟವರು. ಕಲಬುರಗಿ ಸ್ಟೇಷನ್ ಬಜಾರ್ ಪ್ರದೇಶದ ವಿನುತಾ ಹಾಗೂ ಅನೂಪ ಮಾಧವ ಮೃತರು. ಬೈಕ್ ಸವಾರ ಬಸವರಾಜ ಗೊಬ್ಬುರ ಬಿ ಗ್ರಾಮದವರು. ಟಿಟಿಯಲ್ಲಿದ್ದ ಉಳಿದ ಏಳು ಜನ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಗಾಣಗಾಪುರದ ದತ್ತನ ದರ್ಶನ ಮುಗಿಸಿಕೊಂಡು ಕಲಬುರಗಿಗೆ ಬರುತ್ತಿರುವಾಗ ಅಪಘಾತ ಸಂಭವಿಸಿದೆ. ಕಲಬುರಗಿಯಿಂದ ಚವಡಾಪುರದ ಕಡೆಗೆ ಕಬ್ಬು ತುಂಬಿಕೊAಡು ಲಾರಿ ಹೊರಟ್ಟಿತ್ತು. ಸ್ಥಳಕ್ಕೆ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net