ಕಾರು ಡಿಕ್ಕಿಯಾಗಿ ಕೂಲಿ ಕಾರ್ಮಿಕ ಸಾವು

H.B.Vinod
Published on

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಕೂಲಿ ಕಾರ್ಮಿಕ ಮೃತಪಟ್ಟಿದ್ದಾನೆ.

ಚೆಂಬೆಬೆಳ್ಳೂರು ಗ್ರಾಪಂನ ದೇವಣಗೇರಿ ಗ್ರಾಮದ ಬಾಳಕೇರಿ ಪೈಸಾರಿ ನಿವಾಸಿ ಪೂಣಿ ಅವರ ಪುತ್ರ ಕೂಲಿ ಕಾರ್ಮಿಕ ಎಚ್.ಬಿ.ವಿನೋದ್(38) ಮೃತ. ವಿನೋದ್ ಸ್ನೇಹಿತ ದೇವಯ್ಯ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ಆಟೋ ಒಂಟಿ ಅಂಗಡಿ ಗ್ರಾಮದಲ್ಲಿ ನಿಲುಗಡೆಗೊಳಿಸಲಾಗಿತ್ತು. ಹೀಗಾಗಿ ತನ್ನ ಆಟೋವನ್ನು ಮನೆಗೆ ತರಲು ಸೂಚಿಸಿದ್ದ ಎನ್ನಲಾಗಿದೆ. ಸ್ನೇಹಿತನ ಬಳಿಯಿಂದ ಕೀ ಪಡೆದುಕೊಂಡ ವಿನೋದ್ ಒಂಟಿಅಂಗಡಿ ತೆರಳಿ, ವಾಪಸ್ ಮನೆಗೆ ಬರುತ್ತಿದ್ದಾಗ ಕಣ್ಣಂಗಾಲ-ಚೆಂಬೆಬೆಳ್ಳೂರು-ವಿರಾಜಪೇಟೆ ತೆರಳುವ ಮಾರ್ಗದಲ್ಲಿ ಕಾರು ಡಿಕ್ಕಿ ಹೊಡೆದಿದೆ. ವಿನೋದ್ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net