

ಮಡಿಕೇರಿ:
ಪ್ರವಾಸಿ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕೇವಲ ಈ ವರ್ಷದ ಜನವರಿಯಿಂದ ಜುಲೈ ತನಕದ ಅವಧಿಯಲ್ಲೇ 313 ಅಪಘಾತ ಪ್ರಕರಣಗಳು ದಾಖಲಾಗಿದ್ದು, 45 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಹುತೇಕ ಅಪಘಾತಗಳಿಗೆ ಚಾಲನಾ ಲೋಪವೇ ಕಾರಣ ಎಂದು ಹೇಳಲಾಗುತ್ತಿದ್ದು, ಕೊಡಗಿನಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ 8 ಸ್ಥಳಗಳನ್ನು ಬ್ಲಾö್ಯಕ್ ಸ್ಪಾಟ್‌ಗಳಾಗಿ ಗುರುತಿಸಲಾಗಿದೆ.
ಏರು-ತಗ್ಗು, ದೊಡ್ಡ ದೊಡ್ಡ ತಿರುವುಗಳಿಂದ ಕೂಡಿರುವ ಕೊಡಗಿನ ರಸ್ತೆಗಳಲ್ಲಿ ವಾಹನಗಳ ಚಾಲನೆ ಚಾಲಕರ ಪಾಲಿಗೆ ದೊಡ್ಡ ಸವಾಲಾಗಿದೆ. ಎಷ್ಟು ಎಚ್ಚರಿಕೆಯಿಂದ ಓಡಿಸಿದರೂ ಅಲ್ಲಲ್ಲಿ ಅಪಾಯಗಳು ಎದುರಾಗುತ್ತಲೇ ಇರುತ್ತದೆ. ಜಿಲ್ಲೆಯ ಮೂಲಕ ರಾಷ್ಟಿçÃಯ ಹೆದ್ದಾರಿ 275, ರಾಜ್ಯ ಹೆದ್ದಾರಿಗಳು ಹಾದು ಹೋಗಿದ್ದರೂ ಅವು ಹೆಸರಿಗಷ್ಟೇ ಹೆದ್ದಾರಿ ಅನ್ನಿಸಿಕೊಂಡಿವೆ. ಇವುಗಳ ಅಗಲ ಕಡಿಮೆ ಇದ್ದು, ಸಾಮಾನ್ಯ ಜಿಲ್ಲಾ ರಸ್ತೆಗಳಂತೆಯೇ ಕಂಡುಬರುತ್ತದೆ. ಇದಕ್ಕೆ ಇಲ್ಲಿನ ಭೌಗೋಳಿಕ ವಾತಾವರಣವೂ ಒಂದು ಕಾರಣವಾಗಿದ್ದು, ವಾಹನಗಳ ದಟ್ಟಣೆ ಹೆಚ್ಚುತ್ತಿದ್ದಂತೆಯೇ ಅಪಘಾತಗಳ ಸಂಖ್ಯೆಯೂ ಏರುಗತಿಯಲ್ಲಿರುವುದು ಆತಂಕಕಾರಿಯಾಗಿದೆ.
ಹೆದ್ದಾರಿಗಳಲ್ಲಿ ಸಂಭವಿಸುವ ಬಹುತೇಕ ಅಪಘಾತಗಳಿಗೆ ಚಾಲಕನ ಲೋಪವೇ ಕಾರಣ ಎನ್ನುವುದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ. ಅತಿ ವೇಗದ ಚಾಲನೆ, ಅಪಾಯಕಾರಿ ಸ್ಥಳಗಳಲ್ಲಿ ವೇಗ ಮಿತಿ ನಿಗದಿ ಮಾಡಿದ್ದರೂ ನಿರ್ಲಕ್ಷö್ಯ, ತಿರುವುಗಳಲ್ಲಿ ಬೇಜವಾಬ್ದಾರಿ ಚಾಲನೆ.. ಹೀಗೆ ಹಲವು ವಿಷಯಗಳಿಂದಲೂ ಅಪಘಾತಗಳು ಉಂಟಾಗುತ್ತಿರುತ್ತದೆ. ಹೆದ್ದಾರಿಗಳ ದುಸ್ಥಿತಿ, ಸೂಕ್ತ ರೀತಿಯಲ್ಲಿ ಸೂಚನಾ ಫಲಕಗಳು ಅಳವಡಿಸದಿರುವುರಿಂದಲೂ ಅಪಘಾತಗಳು ಸಂಭವಿಸುತ್ತವೆ ಎನ್ನುವ ಅಭಿಪ್ರಾಯವೂ ಪೊಲೀಸ್ ಅಧಿಕಾರಿಗಳಿಂದ ವ್ಯಕ್ತವಾಗುತ್ತದೆ.
ಕೊಡಗಿನಲ್ಲಿ 2022ರಿಂದ ಈಚೆಗೆ ಈ ವರ್ಷದ ಜುಲೈ ಅಂತ್ಯದ ತನಕ ಒಟ್ಟು 1,767 ಅಪಘಾತ ಪ್ರಕರಣಗಳು ದಾಖಲಾಗಿದೆ. ಈ ಅಪಘಾತಗಳಿಂದಾಗಿ 283 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 1,331 ಜನ ವಿವಿಧ ರೀತಿಯಲ್ಲಿ ಗಂಭೀರವಾಗಿ ಗಾಯಗೊಂದು ತಮ್ಮ ಬದುಕಿನ ಜತೆಗೆ ಅವಲಂಬಿತರ ಬದುಕನ್ನೂ ದುರಂತಕ್ಕೆ ದೂಡಿದ್ದಾರೆ.
2022ರಲ್ಲಿ ಜಿಲ್ಲೆಯಲ್ಲಿ 442 ಅಪಘಾತ ಪ್ರಕರಣಗಳು ಸಂಭವಿಸಿದ್ದು, 68 ಜನರು ಮೃತಪಟ್ಟಿದ್ದಾರೆ. 131 ಜನರು ಗಂಭೀರವಾಗಿ ಗಾಯಗೊಂಡಿದ್ದು, 574 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. 2023ರಲ್ಲಿ ರಸ್ತೆ ಅಪಘಾತಗಳಿಗೆ ಸಂಬAಧಿಸಿದAತೆ 530 ಪ್ರಕರಣಗಳು ದಾಖಲಾಗಿದ್ದು, 84 ಜನರು ಪ್ರಾಣ ಕಳೆದುಕೊಂಡಿದ್ದಾರೆ. 721 ಜನರಿಗೆ ಗಂಭೀರ ಗಾಯಗಳಾಗಿದ್ದು, 406 ಜನರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು.
2024ರಲ್ಲಿ ಜಿಲ್ಲೆಯಲ್ಲಿ 482 ರಸ್ತೆ ಅಪಘಾತ ಪ್ರಕರಣಗಳು ವರದಿ ಆಗಿದ್ದವು. 86 ಜನರು ಪ್ರಾಣ ಕಳೆದುಕೊಂಡರೆ, 106 ಜನರಿಗೆ ಗಂಭೀರ ಗಾಯಗಳಾಗಿದ್ದವು. 466 ಜನ ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದರು. ಈ ವರ್ಷದ ಜನವರಿಯಿಂದ ಜುಲೈ ತನಕದ ಮಾಹಿತಿ ಪ್ರಕಾರ ಕೊಡಗಿನಲ್ಲಿ ಬರೋಬ್ಬರಿ 313 ಅಪಘಾತ ಪ್ರಕರಣಗಳು ವರದಿ ಆಗುವ ಮೂಲಕ ಆತಂಕ ಮೂಡಿಸಿದೆ. ಒಟ್ಟು 45 ಮಂದಿ ಈ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. 373 ಜನರಿಗೆ ಗಂಭೀರ ಗಾಯಗಳಾಗಿದ್ದರೆ, 331 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಜಿಲ್ಲೆಯಲ್ಲಿ ಪದೇ ಪದೇ ಅಪಘಾತ ಸಂಭವಿಸುವ ಸ್ಥಳಗಳನ್ನು ಅಧ್ಯಯನ ಮಾಡಿರುವ ಸರ್ಕಾರ ಒಟ್ಟು 8 ಸ್ಥಳಗಳನ್ನು ಬ್ಲಾö್ಯಕ್ ಸ್ಪಾಟ್ ಎಂದು ಗುರುತಿಸಿದೆ.
ಮಡಿಕೇರಿ ತಾಲೂಕಿನಲ್ಲಿ ರಾಷ್ಟಿçÃಯ ಹೆದ್ದಾರಿ 275ರಲ್ಲಿ ಬರುವ ಬೋಯಿಕೇರಿ, ಕುಶಾಲನಗರ ತಾಲೂಕಿನಲ್ಲಿ ರಾಷ್ಟಿçÃಯ ಹೆದ್ದಾರಿ 275ರಲ್ಲಿ ಬರುವ ದಂಧದ ಕೊಠಿ, ಕುಶಾಲನಗರ ತಾಲೂಕಿನಲ್ಲೇ ರಾಷ್ಟಿçÃಯ ಹೆದ್ದಾರಿ 275ರಲ್ಲಿನ ಆನೆಕಾಡು, ಕುಶಾಲನಗರ ತಾಲೂಕಿನಲ್ಲಿ ರಾಷ್ಟಿçÃಯ ಹೆದ್ದಾರಿ 27ರಲ್ಲೇ ಬರುವ ಕಾವೇರಿ ನಿಸರ್ಗಧಾಮ, ಪಿಡಬ್ಯೂಡಿ ವ್ಯಾಪ್ತಿಗೆ ಬರುವ ವಿರಾಜಪೇಟೆ ತಾಲೂಕಿನ ಕೈಕೇರಿ ಭಗವತಿ ಕ್ಲಬ್, ಬಿಟ್ಟಂಗಾಲ-ಬಾಳುಗೋಡು ಜಂಕ್ಷನ್, ಪೊನ್ನಂಪೇಟೆ ತಾಲೂಕಿನ ದೇವರಪುರ ಬಳಿಯ ಸಾವಿರ ಬತ್ತಿ ಎಸ್ಟೇಟ್ ಪಕ್ಕದ ರಸ್ತೆ ಹಾಗೂ ಪೊನ್ನಂಪೇಟೆಯ ಪೀಸ್ ಕ್ಲಬ್, ಜೂನಿಯರ್ ಕಾಲೇಜು ಜಂಕ್ಷನ್, ಫಿಶ್ ಸ್ಟಾಲ್, ಗರ್ಲ್ಸ್ ಹಾಸ್ಟೆಲ್ ಜಂಕ್ಷನ್‌ಗಳನ್ನು ಬ್ಲಾö್ಯಕ್ ಸ್ಪಾಟ್ ಎಂದು ಗುರುತಿಸಲಾಗಿದೆ.
ಸರ್ಕಾರ ರೂಪಿಸಿರುವ ಪ್ರಮಾಣಿತ ಕಾರ್ಯಚರಣಾ ವಿಧಾನದ ಮೂಲಕ ಬ್ಲಾö್ಯಕ್ ಸ್ಪಾಟ್ ಗುರುತಿಸಲಾಗುತ್ತದೆ. ಸುಮಾರು 500 ಮೀ. ಉದ್ದದ ರಸ್ತೆಯ ಸರಪಳಿಯಲ್ಲಿ ಕಳೆದ 3 ಕ್ಯಾಲೆಂಡರ್ ವರ್ಷಗಳ ಅವಧಿಯಲ್ಲಿ ಮರಣವನ್ನಪ್ಪಿದ ಪ್ರಕರಣಗಳು ಮತ್ತು ಗಂಭೀರ ಗಾಯಗೊಂಡ ಪ್ರಕರಣಗಳನ್ನು ಒಳಗೊಂಡು 5 ಅಪಘಾತ ಪ್ರಕರಣಗಳು ಸಂಭವಿಸಿದ್ದರೆ ಅಥವಾ 10 ಸಾವುಗಳು ಸಂಭವಿಸಿರುವ ಸ್ಥಳವನ್ನು ಬ್ಲಾö್ಯಕ್ ಸ್ಪಾಟ್ ಗುರುತಿಸಲಾಗುತ್ತದೆ. ಇಂಥ ಬ್ಲಾö್ಯಕ್ ಸ್ಪಾಟ್‌ಗಳಲ್ಲಿ ಅಪಘಾತಗಳನ್ನು ತಗ್ಗಿಸಲು ರಸ್ತೆ ಸುರಕ್ಷತೆ ವಾರ್ಷಿಕ ಯೋಜನೆಯಡಿ ರಸ್ತೆ ತಿರುವುಗಳಲ್ಲಿ ಅಭಿವೃದ್ಧಿ, ಅಗಲೀಕರಣ, ಸೂಚನಾ ಫಲಕಗಳ ಅಳವಡಿಕೆ, ಕ್ರಾö್ಯಷ್ ಬ್ಯಾರಿಯರ್ಸ್, ಸೋಲಾರ್ ಬ್ಲಿಂಕರ್ಸ್, ಗ್ರೇಡ್ ಸಪರೇಟರ್ಸ್, ಜಂಕ್ಷನ್‌ಗಳ ಅಭಿವೃದ್ಧಿ-ಅಗಲೀಕರಣ, ಅಂಡರ್‌ಪಾಸ್ ಮತ್ತು ಓವರ್‌ಪಾಸ್ ನಿರ್ಮಾಣ ಹಾಗೂ ಇತರೆ ರಸ್ತೆ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಪಘಾತ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಇದರ ಜತೆಗೆ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಬಹುತೇಕ ಅಪಘಾತಗಳನ್ನು ತಪ್ಪಿಸಬಹುದು. ಒಂದು ವೇಳೆ ಅಪಘಾತಗಳಾದರೂ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಗಳು ಹೆಚ್ಚು ಇರುತ್ತದೆ ಎನ್ನುತ್ತಾರೆ ಪೊಲೀಸರು. ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ, ಸೀಟ್ ಬೆಲ್ಟ್ ಬಗ್ಗೆ ನಿರ್ಲಕ್ಷö್ಯವೂ ಪ್ರಾಣಕ್ಕೆ ಸಂಚಕಾರ ತರಬಹುದು. ಪಥ ಶಿಸ್ತು ಪಾಲಿಸದಿರುವುದು, ರಾತ್ರಿಯ ವೇಳೆ ಪ್ರಕಾಶಮಾನವಾದ ಹೆಡ್‌ಲೈಟ್ ಬಳಸುವುದು, ಹೆಡ್‌ಲೈಟ್‌ಗಳ ಡಿಮ್-ಡಿಪ್ ಮಾಡದಿರುವುದು ಕೂಡ ಹೆದ್ದಾರಿಗಳಲ್ಲಿ ಎದುರಿನಿಂದ ಬರುತ್ತಿರುವವರ ಪ್ರಾಣ ತೆಗೆಯುವ ಸಾಧ್ಯತೆ ಇರುತ್ತದೆ.
ಕೊಡಗಿನಲ್ಲಿ ಬೆಟ್ಟ-ಗುಡ್ಡಗಳ ಮೂಲಕ ನಿರ್ಮಾಣ ಆಗಿರುವ ಎತ್ತರ, ತಗ್ಗು, ತಿರುವುಗಳಿಂದ ಕೂಡಿರುವ ರಸ್ತೆಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಚಾಲನೆ ಮಾಡಿದರೂ ಅದು ಕಡಿಮೆಯೇ ಆಗಿರುತ್ತದೆ. ಅನುಭವಿ ಹಿರಿಯ ಚಾಲಕರು ಹೇಳುವ ಪ್ರಕಾರ 'ಮೈಯೆಲ್ಲಾ ಕಣ್ಣಾಗಿ' ಇಲ್ಲಿ ವಾಹನಗಳನ್ನು ಓಡಿಸಬೇಕಾಗುತ್ತದೆ. ಜಿಲ್ಲೆಯ ಹಲವೆಡೆ ಕಂಡುಬರುವ ಮಂಜು ಮುಸುಕಿದ ವಾತಾವರಣವೂ ಅಪಘಾತಗಳ ಸಂಖ್ಯೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಅಪಘಾತಗಳ ಪ್ರಮಾಣವನ್ನು ತಗ್ಗಿಸಲು ಮತ್ತು ಪ್ರಾಣಹಾನಿ ತಪ್ಪಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಸ್ತೆ ಸುರಕ್ಷತೆ ವಾರ್ಷಿಕ ಯೋಜನೆಯಡಿ ರಸ್ತೆ ತಿರುವುಗಳಲ್ಲಿ ಅಭಿವೃದ್ಧಿ, ಅಗಲೀಕರಣ, ಸೂಚನಾ ಫಲಕಗಳ ಅಳವಡಿಕೆ, ಕ್ರಾö್ಯಷ್ ಬ್ಯಾರಿಯರ್ಸ್, ಸೋಲಾರ್ ಬ್ಲಿಂಕರ್ಸ್, ಗ್ರೇಡ್ ಸಪರೇಟರ್ಸ್, ಜಂಕ್ಷನ್‌ಗಳ ಅಭಿವೃದ್ಧಿ-ಅಗಲೀಕರಣ, ಅಂಡರ್‌ಪಾಸ್ ಮತ್ತು ಓವರ್‌ಪಾಸ್ ನಿರ್ಮಾಣ ಹಾಗೂ ಇತರೆ ರಸ್ತೆ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಪಘಾತ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ