ಸರಣಿ ಅಪಘಾತ ಬೈಕ್‌ ಸವಾರ ಸಾವು

Maical narona
Published on

ಕಾರವಾರ: ಬಸ್ ಬೈಕ್ ಹಾಗೂ ಮಹೇಂದ್ರ ಪಿಕಪ್ ವಾಹನಗಳ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟಿçÃಯ ಹೆದ್ದಾರಿ 66 ರಲ್ಲಿ ದಿವೇಕರ್ ಕಾಲೇಜ್ ಬಳಿ ಗುರುವಾರ ನಡೆದಿದೆ.

ಸದಾಶಿವಗಡ ಮೂಲದ ಮೈಕಲ್ ನರೋನಾ(42) ಮೃತರು. ಬೆಳಗ್ಗೆ ಸದಾಶಿವಗಡದಿಂದ ಕಾರವಾರಕ್ಕೆ ಕೆಲಸಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ಮುಂದೆ ತೆರಳುತ್ತಿದ್ದ ಎನ್‌ಡಬ್ಲುಕೆಆರ್‌ಟಿಸಿ ಬಸ್ ದಿವೇಕರ್ ಕಾಲೇಜ್ ಬಳಿ ಪ್ರಯಾಣಿಕರನ್ನು ಇಳಿಸಲು ನಿಂತಿದೆ. ಆಗ ಮೈಕಲ್ ತಮ್ಮ ಬೈಕ್‌ನ್ನು ಬಲಕ್ಕೆ ತೆಗೆದುಕೊಂಡು ಓವರ್‌ಟೇಕ್ ಮಾಡಲು ಯತ್ನಿಸಿದ್ದಾರೆ. ಹಿಂಬದಿಯಿಂದ ವೇಗವಾಗಿ ಬಂದ ಮಹೇಂದ್ರ ಪಿಕಪ್ ವಾಹನ ಬೈಕ್‌ಗೆ ಬಡಿದಿದೆ. ಆ ರಭಸಕ್ಕೆ ಮೈಕಲ್ ಚಲಾಯಿಸುತ್ತಿದ್ದ ಬೈಕ್ ಬಸ್‌ನ ಹಿಂಬದಿಗೆ ಡಿಕ್ಕಿಯಾಗಿದೆ. ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಹಿಂಬದಿ ಸವಾರ ಅರುಣ ಸುಬ್ರಾಯ ನಾಯ್ಕ ತೀವ್ರವಾಗಿ ಗಾಯಗೊಂಡಿದ್ದು, ಕ್ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಸಂಚಾರಿ ಠಾಣೆಯಲ್ಲಿ ಬಸ್ ಹಾಗೂ ಪಿಕಪ್ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net