ಲಾರಿ-ಕಾರು ನಡುವೆ ಡಿಕ್ಕಿಯಾಗಿ ಮಹಿಳೆ ಸಾವು

11 mlv 2
ಮಳವಳ್ಳಿ ತಾಲೂಕಿನ ಬುಗತಗಹಳ್ಳಿ ಗ್ರಾಮದ ಬಳಿಯ ಮಳವಳ್ಳಿ -ಮದ್ದೂರು ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ ಲಾರಿ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಚಿದ್ರಗೊಂಡಿರುವ ಕಾರು.
Published on

ಮಳವಳ್ಳಿ: ತಾಲೂಕಿನ ಬುಗತಗಹಳ್ಳಿ ಗ್ರಾಮದ ಬಳಿಯ ಮಳವಳ್ಳಿ-ಮದ್ದೂರು ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ ಲಾರಿ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.

ಮದ್ದೂರು ತಾಲೂಕು ಮಣಿಗೆರೆ ಗ್ರಾಮದ ಲೇ.ಮಲ್ಲಯ್ಯ ಅವರ ಪತ್ನಿ ನಿಂಗಮ್ಮ(65) ಮೃತರು. ಪ್ರತಿ ದಿನ ಮದ್ದೂರಿನಿಂದ ಮಳವಳ್ಳಿ, ಕೊಳ್ಳೇಗಾಲ ಮಾರ್ಗವಾಗಿ ಚಾಮರಾಜನಗರಕ್ಕೆ ದಿನಪತ್ರಿಕೆ ಬಂಡಲ್‌ಗಳನ್ನು ಸಾಗಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಇದೇ ಕಾರಿನಲ್ಲಿ ಮಣಿಗೆರೆಯಿಂದ ಪಟ್ಟಣದಕ್ಕೆ ಬಂದು ಸೊಪ್ಪು, ತರಕಾರಿಗಳನ್ನು ಖರೀದಿಸಿಕೊಂಡು ಸ್ವಗ್ರಾಮದಲ್ಲಿ ಮಾರಾಟ ಮಾಡುವುದು ನಿಂಗಮ್ಮ ಅವರ ನಿತ್ಯದ ಕಾಯಕವಾಗಿತ್ತು.

ಎಂದಿನಂತೆ ಇದೇ ಕಾರಿನಲ್ಲಿ ಬರುತ್ತಿದ್ದ ವೇಳೆ ಬುಗತಗಹಳ್ಳಿ ಬಳಿ ತಿರುವ ಪಡೆದುಕೊಳ್ಳುತ್ತಿದ್ದ ಸಿಮೆಂಟ್ ತುಂಬಿದ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪತ್ರಿಕೆ ತುಂಬಿದ್ದ ಕಾರು ಉರುಳಿ ಬಿದ್ದಿದ್ದು, ನಿಂಗಮ್ಮ ಅವರ ತಲೆ, ಮುಖ ಛಿದ್ರಗೊಂಡು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net