

ವಿಟ್ಲ: ಕಲ್ಲಡ್ಕ- ಕಾಂಞಗಾಡು ಹೆದ್ದಾರಿಯ ಮಂಗಳಪದವಿನಲ್ಲಿ ರಸ್ತೆಯಲ್ಲಿ ನಿಂತಿದ್ದ ಮಣ್ಣು ಸಾಗಾಟ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಒಕ್ಕೆತ್ತೂರು ಮೂಲದ ಇರ್ಫಾನ್(೧೯) ಎಂಬುವರು ಮೃತಪಟ್ಟು, ಸಹಸವಾರ ಫಾರಿಸ್ ಗಂಭೀರ ಗಾಯಗೊಂಡಿದ್ದಾರೆ.
ಘಟನೆ ಸಂಭವಿಸಿದ ಸಂದರ್ಭ ಗಾಯಾಳುಗಳನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇರ್ಫಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕನ್ಯಾನ ಕಡೆಯಿಂದ ಹೊರರಾಜ್ಯಕ್ಕೆ ಬಾಕ್ಸೈಟ್ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಚಾಲಕ ಮಂಗಳಪದವಿನ ರಸ್ತೆಯಲ್ಲಿಯೇ ನಿಲ್ಲಿಸಿದ್ದು, ನಿಲ್ಲಿಸಿದ್ದ ಬಗ್ಗೆ ಯಾವುದೇ ಮುನ್ನೆಚ್ಚರಿಕಾ ಸೂಚನೆ ಅಳವಡಿಸಿರಲಿಲ್ಲ. ಲಾರಿಯನ್ನು ಕಾಣದೆ ಬೈಕ್ ಸವಾರರು ಲಾರಿಗೆ ಡಿಕ್ಕಿಯಾಗಿದ್ದಾರೆ.