ಸರಣಿ ಅಪಘಾತದಲ್ಲಿ ಓರ್ವ ಗಂಭೀರ

PTR_5 MAY_3
Published on

ಪುತ್ತೂರು: ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಮುಂಭಾಗ ಜೀಪು, ಬೈಕ್, ಸ್ಕೂಟರ್ ಡಿಕ್ಕಿಯಾಗಿ ಓರ್ವ ಗಂಭೀರ ಗಾಯಗೊಂಡಿದ್ದಾರೆ.

ಬೈಕ್‌ನಲ್ಲಿ ಒಬ್ಬರು ಪ್ರಯಾಣಿಸುತ್ತಿದ್ದು, ಈ ಪೈಕಿ ಬಾಲಕನ ಕೈಗೆ ಗಂಭೀರ ಗಾಯವಾಗಿದೆ. ಸವಾರ ಬೈಕ್‌ನಿಂದ ನೆಗೆದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಕೂಟರನ್ನು ಮಹಿಳೆ ಚಲಾಯಿಸಿದ್ದು, ಅಪಘಾತದಿಂದ ಗಾಯಗೊಂಡಿದ್ದಾರೆ. ಜೀಪ್ ಎರಡು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಸುಮಾರು ೧೫ ಮೀ. ದೂರದವರೆಗೆ ಎಳೆದುಕೊಂಡು ಹೋಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಪೊಲೀಸರು ತೆರಳಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net