ಅಪಘಾತ ಪ್ರಕರಣ: ಸಾವಿನ ಸಂಖ್ಯೆ 6 ಕ್ಕೆ ಏರಿಕೆ.

20231016_134357
Published on

ಗದಗ:
ಜಿಲ್ಲೆಯ ನರೇಗಲ್ ಹೋಬಳಿ ಬಳಿ ಸೋಮವಾರ ಬೆಳಗ್ಗೆ ಟಾಟಾ ಸುಮೋ - ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲಿ 5 ಜನ ಸಾವನ್ನಪ್ಪಿ, ನಾಲ್ವರು ಗಾಯಾಳು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಗಾಯಾಳು ಮಕ್ಕಳಲ್ಲಿ ದಿಂಗಾಲೇಶ ಕಲಶೆಟ್ಟಿ(5) ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಅಪಘಾತ ನಂತರ ನಾಲ್ವರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು. ದಿಂಗಾಲೇಶ ಕಲಶೆಟ್ಟಿ ಗಂಭೀರ ಸ್ಥಿತಿಯಲ್ಲಿದ್ದ ಹಿನ್ನೆಲೆ ICU ಗೆ ಸ್ಥಾಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದ ಹಿನ್ನೆಲೆ ಮಧ್ಯಾಹ್ನ 1ಗಂಟೆಗೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಇನ್ನೂ ಮೂವರು ಬಾಲಕರಿಗೆ ಚಿಕಿತ್ಸೆ ಮುಂದು ವರಿಸಲಾಗಿದೆ.

ಮೃತನಾದ ದಿಂಗಾಲೇಶ ಕಲಶೆಟ್ಟಿ(5) ಪೋಷಕರಾದ ಶಿವಕುಮಾರ್ ಕಲಶೆಟ್ಟಿ ಮತ್ತು ಚಂದ್ರಕಲಾ ಕಲಶೆಟ್ಟಿ ಇಬ್ಬರೂ ಸೋಮವಾರ ಬೆಳಗಿನ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net