ಕಾರು ಅಪಘಾತಕ್ಕೆ ಮೂರು ಮಂದಿ ಸಾವು

PTR_28 DEC_4
Published on

ಮಾಣಿ-ಮೈಸೂರು ಹೆದ್ದಾರಿಯ ಪರ್ಲಡ್ಕದಲ್ಲಿ ಶನಿವಾರ ಬೆಳಗಿನ ಜಾವ ರಸ್ತೆ ಬದಿಯ ಕಂದಕ್ಕೆ ಕಾರು ಉರುಳಿ ಬಿದ್ದು, ಅದರಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿದ್ದೆಯ ಮಂಪರಿನಲ್ಲಿ ಕಾರು ಚಲಾಯಿಸಿದ್ದೇ ದುರ್ಘಟನೆಗೆ ಕಾರಣ ಎನ್ನಲಾಗಿದೆ.

ಕಾರು ಚಾಲಕ ಸುಳ್ಯ ತಾಲೂಕು ಜಟ್ಟಿಪಳ್ಳ ನಿವಾಸಿ, ಚಿಕ್ಕಮಗಳೂರು ಕಾರ್ಮಿಕ ಇಲಾಖೆಯಲ್ಲಿ ಅಽಕಾರಿ ಚಿದಾನಂದ(೫೯), ತಂದೆ ನಿವೃತ್ತ ಪೋಸ್ಟ್ ಮಾಸ್ಟರ್ ಅಣ್ಣು ನಾಯ್ಕ (೮೭) ಹಾಗೂ ಪಕ್ಕದ ಮನೆ ನಿವಾಸಿ, ಪ್ಲಂಬಿಂಗ್ ವೃತ್ತಿ ಮಾಡಿಕೊಂಡಿರುವ ರಮೇಶ್ ನಾಯ್ಕ(೫೫) ಮೃತಪಟ್ಟವರು.

ಶನಿವಾರ ಬೆಳಗಿನ ಜಾವ ಗೌರಿಮೂಲೆಯಿಂದ ಮೂವರೂ ಕಾರಿನಲ್ಲಿ ಹೊರಟು, ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆಯ ಮೂಲಕ ಪರ್ಲಡ್ಕಕ್ಕೆ ಬಂದಿದ್ದರು. ಜಂಕ್ಷನ್‌ನಿಂದ ೧೦೦ ಮೀಟರ್ ಸುಳ್ಯ ಕಡೆಗೆ ಹೆದ್ದಾರಿಯಲ್ಲಿ ಸಾಗಬೇಕಾದ ಕಾರು ಮಣ್ಣಿನ ರಸ್ತೆಗೆ ಇಳಿದು ಸಂಪಾಜೆ ಮೂಲದ ರಾಜೇಶ್ ಭಟ್ ಎಂಬುವವರ ಜಮೀನಿಗೆ ಉರುಳಿ ಬಿದ್ದಿದೆ. ಘಟನೆಯ ತೀವ್ರತೆಗೆ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡರು. ಅಪಘಾತ ಯಾರ ಗಮನಕ್ಕೂ ಬಾರದೆ, ತುರ್ತು ಚಿಕಿತ್ಸೆಯೂ ಸಿಗದೆ ಮೂವರೂ ಸ್ಥಳದಲ್ಲೇ ಮೃತಪಡಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net