ದ್ವಿಚಕ್ರ ವಾಹನಕ್ಕೆ ಪಿಕಪ್ ಡಿಕ್ಕಿ, ಇಬ್ಬರಿಗೆ ಗಾಯ

PTR_22 DEC_7
Published on

ಪುತ್ತೂರು: ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ನರಿಮೊಗರು ಅರಣ್ಯ ಇಲಾಖೆಯ ಕಚೇರಿ ಸಮೀಪ ದ್ವಿಚಕ್ರ ವಾಹನ ಹಾಗೂ ಪಿಕಪ್ ನಡುವೆ ಭಾನುವಾರ ರಾತ್ರಿ ಅಪಘಾತ ನಡೆದು ಇಬ್ಬರು ಸವಾರರಿಗೆ ಗಂಭೀರ ಗಾಯವಾಗಿದೆ.

ಸುಳ್ಯ ಚೊಕ್ಕಾಡಿ ಮೂಲದ ಗೌತಮ್(೨೬) ಗಂಭೀರ ಗಾಯಗೊಂಡಿದ್ದಾರೆ. ಸುಳ್ಯ ಕೊಡಿಯಾಳ ಮೂಲದ ಲೋಲಾಕ್ಷ (೨೪) ಗಾಯಗೊಂಡಿದ್ದಾರೆ. ಬೆಳ್ಳಾರೆಯ ಕಡೆಯಿಂದ ಕೂಲಿ ಕೆಲಸ ನಡೆಸುವ ಇಬ್ಬರು ಹಿಂದಿರುಗುವ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಹಿಂಬದಿ ಸವಾರ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರ ಗಾಯವಾಗಿ ಪರಿಸ್ಥಿತಿ ಚಿಂತಾಜನಕವಿದೆ. ಸವಾರನ ಕಾಲಿಗೆ ತೀವ್ರ ತರವಾದ ಗಾಯವಾಗಿದೆ. ಗಾಯಾಗಳುಗಳು ಕೆಲವು ಹೊತ್ತಿನ ತನಕ ರಸ್ತೆಯಲ್ಲೇ ಬಾಕಿಯಾಗಿದ್ದು, ಯಾರೊಬ್ಬರೂ ಆಸ್ಪತ್ರೆಗೆ ಸೇರಿಸಲು ಮುಂದೆ ಬರಲಿಲ್ಲ. ಬಳಿಕ ಪುತ್ತೂರು ಆಸ್ಪತ್ರೆಗೆ ಖಾಸಗಿ ವಾಹನದ ಮೂಲಕ ಕರೆದೊಯ್ದು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net