ಮುಚ್ಚಿರಪದವು ಕಾರು ಅಪಘಾತ

IMG-20241113-WA0012
Published on

ವಿಟ್ಲ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರೊಂದು ಬ್ರೇಕ್ ಫೈಲ್ ಆಗಿ ಪಲ್ಟಿಯಾದ ಘಟನೆ ಮುಚ್ಚಿರಪದವು ಎಂಬಲ್ಲಿ ನಡೆದಿದೆ.

ಘಟನೆಯಿಂದ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಚಾಲಕನ ತಲೆಗೆ ಗಾಯವಾಗಿದ್ದು ಹಲವು ಮಕ್ಕಳಿಗೂ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

ಪೆರುವಾಯಿ ಮಿತ್ತಮೂಲೆ ಎಂಬಲ್ಲಿದ್ದ ಮಕ್ಕಳನ್ನು ವಿಟ್ಲದ ಶಾಲೆಗೆ ಕೊಂಡೊಯ್ಯುಲು ಬಸ್ಸಿಗೆ ಹತ್ತಿಸಲು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಚಾಲಕ ಮುಳಿಯ ರಾಮ ತಲೆಗೆ ಗಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net