ಸ್ಕೂಟರ್-ಕಾರು ನಡುವೆ ಡಿಕ್ಕಿ : ಸವಾರರಿಬ್ಬರಿಗೆ ಗಾಯ

accident-15
Published on

ಪುತ್ತೂರು ಗ್ರಾಮಾಂತರ: ಸ್ಕೂಟರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪೇಟೆಯಲ್ಲಿ ನಡೆದಿದೆ.

ಕೆದಂಬಾಡಿ ಗ್ರಾಮದ ಸಾರಪುಣಿ ನಿವಾಸಿ ಪಿ.ಅಬ್ದುಲ್ ಶಕೂರ್(45) ಮತ್ತು ಅಬೂಬಕ್ಕರ್ ಗಾಯಗೊಂಡವರು. ಅವರಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಬ್ದುಲ್ ಶಕೂರ್, ಅಬೂಬಕ್ಕರ್ ಹೋಗುತ್ತಿದ್ದ ಸ್ಕೂಟರ್‌ಗೆ ಈಶ್ವರಮಂಗಲ ಪೇಟೆಯಲ್ಲಿ, ಚಾಲಕ ಸೂರ್ಯನಾರಾಯಣ ಭಟ್ ಎಂಬುವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net