ಅಂಗವಿಕಲರೊಬ್ಬರ ವಾಹನಕ್ಕೆ ಲಾರಿ ಡಿಕ್ಕಿ - ಸವಾರ ಸಾವು

PTR_23 JUL_15
Published on

ಪುತ್ತೂರು: ಮಾಣಿ ಮೈಸೂರು ಹೆದ್ದಾರಿಯ ಮಂಜಳಪಡ್ಪು ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಲಾರಿಯೊಂದು ಅಂಗವಿಕಲರ ವಾಹನಕ್ಕೆ ಡಿಕ್ಕಿಹೊಡೆದು ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಮಿತ್ತೂರು ಸಮೀಪದ ಏಮಾಜೆ ನಿವಾಸಿ ಶಿವರಾಮ (೫೦) ಮೃತ ವ್ಯಕ್ತಿಯಾಗಿದ್ದಾರೆ. ಮೂರು ಚಕ್ರದ ವಿಶೇಷ ವಾಹನದಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿಹೊಡೆದಿದೆ. ವಾಹನ ಮಧ್ಯದಲ್ಲಿ ಸವಾರ ಸಿಲುಕಿಕೊಂಡಿದ್ದು, ಸುಮಾರು ಅರ್ಧ ತಾಸಿನಿಂದ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಬಾರದೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net