ಲಾರಿ ರಸ್ತೆಯಲ್ಲಿ ಉರುಳಿ ಕೆಲವು ಸಮಯ ಸಂಚಾರ ಸಮಸ್ಯೆ

PTR_10 JUN_6
Published on

ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ ಕನಕಮಜಲು ಸಮೀಪದ ಕೋಡಿ ತಿರುವಿನಲ್ಲಿ ಚಾಲಕನ ನಿಯಂತ್ರಣದ ತಪ್ಪಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ರಸ್ತೆಯಲ್ಲಿ ಉರುಳಿ ಕೆಲವು ಸಮಯ ಸಂಚಾರ ಸಮಸ್ಯೆಯಾಯಿತು.


ಮಡಿಕೇರಿಯಿಂದ ಮಂಗಳೂರಿಗೆ ಗ್ಯಾಸ್ ತುಂಬಿಸಿಕೊಳ್ಳುವುದಕ್ಕೆ ಸಾಗುತ್ತಿದ್ದ ಸಿಲಿಂಡರ್ ತುಂಬಿದ ಲಾರಿ ಮಳೆಯ ಕಾರಣದಿಂದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದೆ. ರಸ್ತೆಗೆ ಬಿದ್ದ ರಭಸಕ್ಕೆ ಒಂದು ಸಿಲಿಂಡರ್‌ನಲ್ಲಿ ಉಳಿಕೆಯಾಗಿದ್ದ ಗ್ಯಾಸ್ ಸೋರಿಕೆಯಾಗಿದೆ. ಇದರಿಂದ ಆತಂಕಗೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಸುಳ್ಯದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net