ದ್ವಿಚಕ್ರ ವಾಹನ - ಜೀಪ್ ನಡುವೆ ಭೀಕರ ಅಪಘಾತ - ಓರ್ವ ಸಾವು

Published on

ಪುತ್ತೂರು: ಸುಬ್ರಹ್ಮಣ್ಯ ಮಂಜೇಶ್ವರ ಹೆದ್ದಾರಿ ರಸ್ತೆಯ ನರಿಮೊಗರು ಸಮೀಪದ ಅಪಘಾತ ಪ್ರದೇಶದಲ್ಲಿ ಜೀಪು ಹಾಗೂ ದ್ವಿಚಕ್ರ ನಡುವೆ ಅಪಘಾತ ಸಂಭವಿಸಿದೆ.

ಬೈಕ್ ಸವಾರ ಲೋಕೇಶ್ ಗೌಡ (45) ಮೃತ ವ್ಯಕ್ತಿಯಾಗಿದ್ದು, ಬೈಕ್ ನಲ್ಲಿದ್ದ ಇಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.

ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಜೀಪಿನ ಜೊತೆಗೆ ದೂರದ ವರೆಗೆ ಎಳೆಯಲ್ಪಟ್ಟಿದೆ ಎಂದು ಹೇಳಲಾಗಿದೆ. ಅದರಲ್ಲಿದ್ದ ಸವಾರರೂ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net