ಲಾರಿ ಡಿಕ್ಕಿಯಿಂದ ರಸ್ತೆಗೆ ಉರುಳಿದ ವಿದ್ಯುತ್ ಕಂಬಗಳು

IMG-20240118-WA0002
Published on

ಬೆಳ್ತಂಗಡಿ: ಕಾಂಕ್ರೀಟ್ ಮಿಕ್ಸಿಂಗ್ ಲಾರಿಯೊಂದು ವಿದ್ಯುತ್ ತಂತಿಗಳನ್ನು ಎಳೆದಾಡಿ, ಎರಡು ವಿದ್ಯುತ್ ಕಂಬಗಳನ್ನು ರಸ್ತೆಗೆ ಉರುಳಿಸಿದ ವಿದ್ಯಮಾನ ನಾಲ್ಕೂರು ಗ್ರಾಮದ ಸೂಳಬೆಟ್ಟು ಎಂಬಲ್ಲಿ ತಡರಾತ್ರಿ ನಡೆದಿದೆ.


ವೇಣೂರು- ಅಳದಂಗಡಿ ರಸ್ತೆಯಲ್ಲಿನ ಸೂಳಬೆಟ್ಟು ಎಂಬಲ್ಲಿ ರಾತ್ರಿ, ಲಾರಿಯ ಚಾಲಕ ಮೇಲಿರುವ ತಂತಿಗಳನ್ನು ಗಮನಿಸದೆ ಚಲಾಯಿಸಿದ್ದರಿಂದ ತಂತಿಗಳು ವಾಹನಕ್ಕೆ ಸಿಲುಕಿವೆ. ಅದು ಚಾಲಕನ‌ ಗಮನಕ್ಕೆ ಬಾರದೆ ಆತ ಏಕಾಏಕಿ ಮುಂದುವರಿದಿದ್ದಾನೆ ಇದರಿಂದ ತಂತಿಗಳೊಂದಿಗೆ ಎರಡು ಜೋಡಿ ಕಂಬಗಳು ರಸ್ತೆಗೆ ಅಡ್ಡಲಾಗಿ ಬೀಳುವಂತಾಗಿದೆ. ತಂತಿಗಳ ಘರ್ಷಣೆಯಿಂದ ಭಾರೀ ಬೆಂಕಿ ಕಾಣಿಸಿತ್ತು.


ಕಾರ್ಕಳದ ಲಕ್ಷ್ಮೀ ಕನ್ಸ್ಟ್ರಕ್ಷನ್ ಅವರ ಲಾರಿಯಾಗಿದ್ದು ಅದನ್ನು ಅಳದಂಗಡಿಯಲ್ಲಿ ತಡೆಹಿಡಿಯಲಾಗಿದೆ. ಚಾಲಕ ಹಾವೇರಿಯವನಾಗಿದ್ದು ಆತನನ್ನು ವೇಣೂರು ಠಾಣೆಯಲ್ಲಿ ಕುಳ್ಳಿರಿಸಲಾಗಿದೆ.
ಸ್ಥಳಕ್ಕೆ ಮೆಸ್ಕಾಂ ಇಂಜಿನಿಯರ್, ವೇಣೂರು ಠಾಣೆಯ ವೆಂಕಟೇಶ್ ಭೇಟಿ ನೀಡಿದ್ದಾರೆ. ಘಟನೆಯಿಂದಾಗಿ ಘನ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net