ಆನಂದ ಆಳ್ವರಿಂದ ಕೋಟಿಗೀತಾ ಲೇಖನ ದೀಕ್ಷೆ ಯಜ್ಞ ಸ್ವೀಕಾರ

ananda alva
Published on

ಮೂಡುಬಿದಿರೆ: ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಪಂಚ ಮಹಾಯೋಜನೆಗಳಲ್ಲೊಂದಾದ ಕೋಟಿಗೀತಾ ಲೇಖನ ಯಜ್ಞ ದೀಕ್ಷೆಯನ್ನು 105 ವರ್ಷದ ಮಿಜಾರುಗುತ್ತು ಆನಂದ ಆಳ್ವ ಸ್ವೀಕರಿಸಿದರು.


ಆನಂದ ಆಳ್ವರು ತಮ್ಮ ಮೊಮ್ಮಗ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಅವರ ಸಹಕಾರದೊಂದಿಗೆ 2024ರಿಂದ 2026ರೊಳಗೆ ಭಗವದ್ಗೀತೆಯನ್ನು ಬರೆದು ಪರ್ಯಾಯದ ಅವಧಿಯಲ್ಲಿ ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಲಿದ್ದಾರೆ. ಕೋಟಿಗೀತಾ ಲೇಖನ ಯಜ್ಞ ಸಮಿತಿಯ ಸಂಕರ್ಷಣ ಪ್ರಖಂಡದ ಪ್ರಚಾರಕ ಕೆ.ವಿ.ರಮಣ್ ಅವರು ಸಂಕಲ್ಪ ಮಂತ್ರ ಪಠಿಸಿ ಲೇಖನ ಪುಸ್ತಕ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net