

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ ಕಾರ್ಯಾಲಯದಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಇ-ಖಾತಾ ಅರ್ಜಿ ಸ್ವೀಕರಿಸುವ ಕಾರ್ಯ ಆರಂಭಗೊಂಡಿದ್ದು. ಬುಧವಾರ ಸಾರ್ವಜನಿಕರಿಂದ 15 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಪೌರಾಯುಕ್ತ ಎ.ರಮೇಶ್ ಹೇಳಿದರು.
ಪಟ್ಟಣ ವ್ಯಾಪ್ತಿಯಲ್ಲಿ ನಗರ ಯೋಜನೆ ಅನುಮೋದನೆ ಪಡೆಯದಿರುವ ನಿವೇಶನ ಮತ್ತು ಕಟ್ಟಡಗಳಿಗೆ ಇ-ಸ್ವತ್ತು( ನಮೂನೆ-3) ನೀಡಲಾಗುತ್ತಿದೆ ಎಂದು ಪತ್ರಿಕೆಗೆ ತಿಳಿಸಿದರು.
ಇ-ಖಾತೆಗೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳ ಬಗ್ಗೆ ವಿವರವನ್ನು ನಗರಸಭೆ ಕಚೇರಿಯ ಮಾಹಿತಿ ಫಲಕದಲ್ಲಿ ಹಾಕಲಾಗಿದೆ. ಈಗಾಗಲೇ ಸಾರ್ವಜನಿಕರು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದು ಅರ್ಜಿ ಪಡೆಯುತ್ತಿದ್ದಾರೆ. ಸುಮಾರು 15 ಅರ್ಜಿಗಳು ಸಲ್ಲಿಕೆಯಾಗಿದೆ. ಅರ್ಜಿ ಸಲ್ಲಿಸಿ ಮುಂದಿನ 7 ದಿನಗಳಲ್ಲಿ ದಾಖಲೆಗಳು, ಸ್ಥಳ ಪರಿಶೀಲಿಸಿ ಇ-ಸ್ವತ್ತು ನೀಡಲಾಗುತ್ತದೆ ಎಂದರು.