ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ

Published on

ಸಿರಿಗೇರಿ: ಸಮೀಪದ ನಡವಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆ ಕ್ರೀಡಾಂಗಣದಲ್ಲಿ ಸಿರಿಗೇರಿ, ಎಂ.ಸೂಗೂರು ಕ್ಲಸ್ಟರ್‌ಗಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಪ್ರಾಚಾರ್ಯ ಸುನಂದ ಹಾಗೂ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣ ಅಧಿಕಾರಿ ಬಿ.ರಮೇಶ ಬುಧವಾರ ಚಾಲನೆ ನೀಡಿದರು.

ಪ್ರಭಾರ ಪ್ರಾಚಾರ್ಯ ಸುನಂದ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವಾಗುತ್ತದೆ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು. ದೈಹಿಕ ಶಿಕ್ಷಣ ಪರಿವೀಕ್ಷ ಣ ಅಧಿಕಾರಿ ಬಿ.ರಮೇಶ ಮಾತನಾಡಿದರು. ಎರಡೂ ಕ್ಲಸ್ಟರ್‌ಗಳ 35 ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಂದ 450 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ವಸತಿ ಶಾಲೆ ನಿಲಯ ಪಾಲಕರಾದ ಸಂತೋಷ್ ಮೆಟ್ರಿ, ಗ್ರಾಪಂ ಅಧ್ಯಕ್ಷೆ ಉಮಾದೇವಿ ಸತ್ಯನಾರಾಯಣ, ಪಿಡಿಒ ಅನ್ನಪೂರ್ಣ, ಶಿಕ್ಷಣ ಇಲಾಖೆ ಕೋ-ಆರ್ಡಿನೇಟರ್ ತಮ್ಮನಗೌಡಪಾಟೀಲ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಖಜಾಂಚಿ ಎಚ್.ದುರುಗಪ್ಪ, ಕಾರ್ಯದರ್ಶಿ ಹನುಮಾನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net