ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ

KABADDI
Published on

ಅಳ್ನಾವರ: ಕ್ರೀಡೆಗಳಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಮುಖ್ಯ ಶಿಕ್ಷಕ ಎಸ್.ಎಸ್. ಶಿಂಗೆ ಹೇಳಿದರು. ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಾಥಮಿಕ ಶಾಲೆಗಳ ವಾರ್ಷಿಕ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ವ್ಯಾಯಾಮ, ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸದೃಢ ಶರೀರ ರಚಿಸಿಕೊಳ್ಳಲು ಸಾಧ್ಯವಿದೆ ಎಂದರು. ಸಿಆರ್​ಪಿ ಎಸ್.ಆರ್. ದೊಡಮನಿ, ಎಸ್​ಡಿಎಂಸಿ ಅಧ್ಯಕ್ಷೆ ಗೌರವ್ವ ಅಂಚಿ ಮಾತನಾಡಿದರು. ಹೂವಪ್ಪ ಚಲವಾದಿ, ಆರ್.ಜಿ. ಹಿರೇಮಠ, ಶಿವಾ ಭಜಂತ್ರಿ, ಮಹೇಶ ಮುತ್ನಾಳ, ವೆಂಕಟೇಶ ಸಿದ್ಮಲ, ಹುಸೇನ್ ಗಡ್ಕರಿ, ಪುಂಡಲೀಕ ಪಾರಡಿ, ಆರ್.ಜಿ. ಸಾವಂತ, ಇತರರಿದ್ದರು. ಮಂಜುಳಾ ಅರ್ಕಾಚಾರಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net