ಸೋಲು ಗೆಲುವನ್ನು ಕ್ರೀಡಾ ಮನೋಭಾದಿಂದ ಸ್ವೀಕರಿಸಿ

17spt5
ಸೋಮವಾರಪೇಟೆ ತಾಲೂಕಿನ ಮಾದಾಪುರ ಹಿಂದು ಮಲಯಾಳಿ ಕುಟುಂಬದ ವತಿಯಿಂದ ಆಯೋಜಿಸಿರುವ ಕೊಡಗು ಹಿಂದು ಮಲೆಯಾಳ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಡಾ.ಮಂತರ್‌ಗೌಡ ಚಾಲನೆ ನೀಡಿದರು. ವಿಜಯ, ಪ್ರಕಾಶ್, ಸುರೇಶ್, ಅಶೋಕ ಇದ್ದರು.
Published on

ಸೋಮವಾರಪೇಟೆ : ಮಾದಾಪುರ ಹಿಂದು ಮಲಯಾಳಿ ಕುಟುಂಬ ವತಿಯಿಂದ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕೊಡಗು ಹಿಂದು ಮಲೆಯಾಳ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಡಾ.ಮಂತರ್‌ಗೌಡ ಚಾಲನೆ ನೀಡಿದರು.

ಕ್ರೀಡಾಕೂಟದ ಮೂಲಕ ಸಮಾಜದ ಬಾಂಧವರು ಒಂದಾಗಬೇಕು. ಸಮಾಜದ ಒಗ್ಗಟ್ಟಿನಿಂದ ಉತ್ತಮ ಕೆಲಸಗಳನ್ನು ಮಾಡಬೇಕು. ಸೋಲು ಗೆಲುವನ್ನು ಕ್ರೀಡಾಮನೋಭಾದಿಂದ ಸ್ವೀಕರಿಸಬೇಕು. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಅರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ಗ್ರಾಮೀಣ ಯುವಕರ ಪ್ರತಿಭಾ ಪ್ರದರ್ಶನಕ್ಕೆ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿದೆ. ಕೊಡಗು ಕ್ರೀಡೆಯ ತವರೂರು, ಕ್ರೀಡೆಯನ್ನು ಪ್ರತಿಯೊಬ್ಬರೂ ಪ್ರೀತಿಸುತ್ತಾರೆ. ಕ್ರೀಡಾಪಟುಗಳಿಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ವೇದಿಕೆಯಲ್ಲಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ, ಸ್ಥಾಪಕ ಅಧ್ಯಕ್ಷ ಪಿ.ಡಿ.ಪ್ರಕಾಶ್, ಮಾದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಭಾವೆ, ಪ್ರಮುಖರಾದ ಎಂ.ಬಿ.ಅಶೋಕ, ಪುರುಷೋತ್ತಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net