ಸೋಲು ಗೆಲುವು ಸಮನಾಗಿ ಸ್ವೀಕರಿಸಿ

Accept victory and defeat equally.
ಚಿಮ್ಮಡ ಗ್ರಾಮದಲ್ಲಿ ನಡೆದ ಚಿಮ್ಮಡ ಕಬಡ್ಡಿ ವೈಭವ ಮುಕ್ತ ಕಬಡ್ಡಿ ಪಂದ್ಯಾವಳಿ ಪ್ರಭು ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಪ್ರವೀಣ ಪೂಜಾ, ಕಾಂಗ್ರೆಸ್ ಗ್ರಾಮ ಘಟಕದ ಅಧ್ಯಕ್ಷ ಉಮೇಶ ಪೂಜಾರಿ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದ ಕವಟಿ ಇದ್ದರು.
Published on

ಚಿಮ್ಮಡ: ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ ಪ್ರಕ್ರಿಯೆ. ಗೆಲುವಿಗೆ ಬೀಗದೆ, ಸೋಲಿಗೆ ಧೃತಿಗೆಡದೆ ಅದನ್ನು ಸಮನಾಗಿ ಸ್ವೀಕರಿಸುವವನೇ ನಿಜವಾದ ಕ್ರೀಡಾಪಟು ಎಂದು ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.

ಗ್ರಾಮದ ಓಂ ಪ್ರಭುಲಿಂಗೇಶ್ವರ ಯುವಕರ ಕ್ರೀಡಾ ಸಂಘ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಚಿಮ್ಮಡ ಕಬಡ್ಡಿ ವೈಭವ ಮುಕ್ತ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿ, ಆಟದಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ. ಸೋತ ತಂಡ ಗೆದ್ದ ತಂಡಕ್ಕೆ ಅಭಿನಂದಿಸಿದಾಗಲೇ ಕ್ರೀಡೆಗೊಂದು ಬೆಲೆ ಬರುತ್ತದೆ ಎಂದರು.

ಸಂಘದ ಅಧ್ಯಕ್ಷ ಪ್ರವೀಣ ಪೂಜಾರಿ ಮಾತನಾಡಿ, ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಇಂದು ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಿದ್ದು, ಇದಕ್ಕೆ ಗ್ರಾಮೀಣ ಭಾಗದ ಕ್ರೀಡಾ ಪೋಷಕರ ಪ್ರೋತ್ಸಾಹವೇ ಪ್ರಮುಖ ಕಾರಣ ಎಂದು ಹೇಳಿದರು.

ಕಾಂಗ್ರೆಸ್ ಗ್ರಾಮ ಘಟಕದ ಅಧ್ಯಕ್ಷ ಉಮೇಶ ಪೂಜಾರಿ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದ ಕವಟಿ, ಮುಖಂಡರಾದ ಮಹಾಂತೇಶ ಜಾಲಿಕಟ್ಟಿ, ಬಾಳಪ್ಪ ಗಡೆಪ್ಪನವರ, ಮಹಾಲಿಂಗ ಬಳಗಾರ, ನಾಗಪ್ಪ ಆಲಕನೂರ, ತುಕಾರಾಮ ದೊಡಮನಿ, ಶಿವಪ್ಪ ದಿನ್ನಿಮನಿ, ಮಹಾದೇವ ಅಥಣಿ ಇತರರಿದ್ದರು.

ಶನಿವಾರ ರಾತ್ರಿ ನಡೆದ ಆರಂಭಿಕ ಪಂದ್ಯದಲ್ಲಿ ಸಂಶಿ ಕಬಡ್ಡಿ ಟೀಮ್ ಹಾಗೂ ಕೆಸರಗೊಪ್ಪದ ನೇತಾಜಿ ಕಬಡ್ಡಿ ತಂಡಗಳ ನಡುವೆ ನಡೆದ ಹೋರಾಟದಲ್ಲಿ ನೇತಾಜಿ ತಂಡ ಅನಾಯಾಸವಾಗಿ 29-7ರ ಅಂತರದಲ್ಲಿ ಸಂಶಿ ತಂಡವನ್ನು ಸೋಲಿಸುವ ಮೂಲಕ ಶುಭಾರಂಭ ನೀಡಿತು. ನೆರೆದ ಸಾವಿರಾರು ಜನ ಪ್ರೇಕ್ಷಕರು ಈ ಗೆಲುವಿಗೆ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net