

ವಿಜಯಪುರ: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವ ಜತೆಗೆ ಅದರಲ್ಲಿನ ಸೋಲು&ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳಸಿಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ಕ್ರೀಡೆಗಳಿಗೆ ಮಹತ್ತರವಾದ ಅವಕಾಶಗಳಿದ್ದು, ಸತತ ಪ್ರಯತ್ನ ಮತ್ತು ಉತ್ತಮ ತರಬೇತಿ ಸಾಧನೆ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ (ಪ.ಪೂ) ಉಪನಿರ್ದೇಶಕರ ಡಾ. ಸಿ.ಕೆ. ಹೊಸಮನಿ ಸಲಹೆ ನೀಡಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪ.ಪೂ) ಮತ್ತು ಸಿಕ್ಯಾಬ್ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಮೇಲಾಟಗಳ (ಅಥ್ಲೆಟಿಕ್ಸ್) ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಪಟುಗಳು ಪ್ರಚೋದನೆಗೆ ಒಳಗಾಗದೇ, ಕ್ರೀಡಾಶಿಸ್ತು ಕ್ರೀಡಾ ಮನೋಭಾವದಿಂದ ವರ್ತಿಸುವ ಜತೆಗೆ ಎಲ್ಲರ ಮನ ಗೆಲ್ಲಲ್ಲು ಮುಂದಾಗಬೇಕು. ಅಥ್ಲೆಟಿಕ್ಸ್ ಕ್ರೀಡೆಗಳು ಸಾಮಾನ್ಯವಾಗಿ ವೈಯಕ್ತಿಕ ಆಟಗಳಾಗಿದ್ದು, ಸೋಲು&ಗೆಲುವುಗಳನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಬೆಳಸಿಕೊಳ್ಳುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಿಕ್ಯಾಬ್ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಸದ್ಯದ ದಿನಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ ನೀಡುತ್ತಿರುವುದು ಸಂತಸದ ಸಂಗತಿ. ರಜೆ ಮತ್ತು ಪರೀೆಗಳ ಮಧ್ಯೆಯೂ ಕ್ರೀಡಾಳುಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿರುವುದು ಅನುಕರಣೀಯ ಎಂದರು.
ಸಿಕ್ಯಾಬ್ ಪಪೂ ಡೀನ್ ಎನ್.ಎಸ್. ಭೂಸನೂರ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಉಪನಿರ್ದೇಶಕ ಡಾ. ಸಿ.ಕೆ. ಹೊಸಮನಿ, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ ಮತ್ತು ಡೀನ್ ಎನ್.ಎಸ್. ಭೂಸನೂರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಸಂಯೋಜಕ ಎಸ್.ಎಸ್. ದುರ್ಗಿ, ಎಂ.ಬಿ. ಹೂಗಾರ, ಎಸ್.ಆರ್. ಮುತ್ತಗಿ, ಗಣೇಶ ಗುನ್ನಾಪೂರ, ಶ್ರೀಶೈಲ ಮಾಳಜಿ, ದೈಹಿಕ ಶಿಕ್ಷಣ ಉಪನ್ಯಾಸಕ ಜೆ.ಟಿ. ದೇವರೆಡ್ಡಿ, ಎಸ್.ಬಿ. ಗೋಗಿ ಮತ್ತಿತರರಿದ್ದರು.
ಪ್ರಾಚಾಯೆರ್ ಎಸ್.ಕೆ. ಕಟ್ಟಿಮನಿ ಸ್ವಾಗತಿಸಿ ಪರಿಚಯಿಸಿದರು. ಎ.ಎಲ್. ನಾಗೂರ ನಿರೂಪಿಸಿದರು. ಡಾ. ಎಸ್.ಆರ್. ಬ್ಯಾಕೋಡ ವಂದಿಸಿದರು.