

ಮಡಿಕೇರಿ: ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಮುಕ್ತ ಟೇಬಲ್ ಟೆನ್ನಿಸ್ ಪಂದ್ಯಾವಳಿ ನಡೆಯಿತು.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅರಣ್ಯ ಮಹಾ ವಿದ್ಯಾನಿಲಯದ ಡೀನ್ ಡಾ.ಜಿ.ಎಂ.ದೇವಗಿರಿ, ವಿದ್ಯಾರ್ಥಿಗಳಿಗೆ ಶುಭಕೋರಿ ಪಂದ್ಯಾವಳಿಯ ಸೋಲು ಗೆಲುವು ಮುಖ್ಯ ಎಲ್ಲವನ್ನು ಸಮಾನವಾಗಿ ಸ್ವೀಕರಿಸಿ ಉನ್ನತ ಸ್ಥಾನಕ್ಕೆ ಏರಬೇಕು ಎಂದು ಸಲಹೆ ನೀಡಿದರು.
ವಿವಿಧ ವಿಭಾಗಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಸುಮಾರು ೧೨೦ಕ್ಕೂ ಹೆಚ್ಚಿನ ಆಟಗಾರರು ಭಾಗವಹಿಸಿದ್ದರು. ಈ ಸಂದರ್ಭ ಭಾರತ ಹಾಕಿ ಕ್ರೀಡಾಪಟು ಕೆ.ಟಿ.ಮೋಹನ್, ಉಪಸ್ಥಿತರಿದ್ದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಧ್ಯಾಪಕ ಡಾ.ರಾಮಕೃಷ್ಣ ಹೆಗ್ಡೆ, ಡಾ.ಮಹೇಶರಪ್ಪ, ಗ್ರಂಥಪಾಲಕ ಸುಬ್ರಮಣಿ, ಪೊನ್ನಂಪೇಟೆ ಚುನಾವಣಾಧಿಕಾರಿ ಮಹೇಶ್ ಹೊಳ್ಳ, ಕೊಡಗು ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ವಿ.ಎಸ್.ಮೊಹಮ್ಮದ್ ಅಸೀಫ್ ಮತ್ತು ಪಿ.ಎಲ್.ಮಂಜುನಾಥ್, ಕೆ.ಎನ್.ಪ್ರವೀಣ್‌ಶೇಟ್ ಹಾಜರಿದ್ದರು, ವಿಜೇತರಿಗೆ ಬಹುಮಾನ ವಿತರಿಸಿದರು.
ವಿಜೇತರ ವಿವರ: ೧೦ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚಿರಂಜೀವಿ(ಪ್ರ), ದರ್ಶನ್(ದ್ವಿ), ಬಾಲಕಿಯರ ವಿಭಾಗದಲ್ಲಿ ಕೆ.ಲಿಪಿಕಾ (ಪ್ರ), ಲಾವಣ್ಯ(ದ್ವಿ), ೧೫ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕೆ.ಲಿತಶ್(ಪ್ರ), ಅವನೀಶ್(ದ್ವಿ), ಬಾಲಕಿಯರ ವಿಭಾಗದಲ್ಲಿ ಸಿಂಚನಾ (ಪ್ರ), ಲೋಚನಾ(ದ್ವಿ) ಸ್ಥಾನವನ್ನು ಪಡೆದುಕೊಂಡಿದ್ದಾರೆ.
೧೮ ವರ್ಷದೊಳಗಿನ ಯುವಕರ ವಿಭಾಗದಲ್ಲಿ ಸಹದೆ ಶಬೀರ್(ಪ್ರ), ಕೆ.ಲೀತೇಶ್(ದ್ವಿ), ಯು-೨೫ ಯುವಕರ ವಿಭಾಗದಲ್ಲಿ ಕೆ.ಲೀತೆಶ್ (ಪ್ರ), ಅದೀಬ್ ವಸೀಂ(ದ್ವಿ), ವಿದ್ಯಾರ್ಥಿನಿಯರ ವಿಭಾಗದಲ್ಲಿ ರಕ್ಷಿತಾ(ಪ್ರ), ಸಿಂಚನಾ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಮುಕ್ತ ವಿಭಾಗದಲ್ಲಿ ರಚನ್ ಪೊನ್ನಪ್ಪ(ಪ್ರ), ಕೆ.ಎ.ಈಶ್ವರ್(ದ್ವಿ), ಮುಕ್ತ ಡಬಲ್ಸ್ ಪುರುಷರ ವಿಭಾಗದಲ್ಲಿ ರಚನ್ ಪೊನ್ನಪ್ಪ ಮತ್ತು ಡೆರಿಕ್(ಪ್ರ), ಮಂಜುನಾಥ್ ಮತ್ತು ವರುಣ್ ಸುಧಾಕರ(ದ್ವಿ), ಮಿಕ್ಸ್‌ಡ್ ಡಬಲ್ಸ್‌ನಲ್ಲಿ ಈಶ್ವರ ಮತ್ತು ರಕ್ಷಿತಾ(ಪ್ರ), ರಚನ್ ಪೊನ್ನಪ್ಪ ಮತ್ತು ನಮಿತಾ(ದ್ವಿ), ಮಹಿಳೆಯರ ಮುಕ್ತ ಡಬಲ್ಸ್‌ನಲ್ಲಿ ತಂಗಮ್ಮ ಮತ್ತು ರೀತ್ ಗಣಪತಿ(ಪ್ರ), ನಮಿತಾ ಮತ್ತು ಮನಾಸಾ(ದ್ವಿ), ೫೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರವೀಣ್ ಶಿಟ್(ಪ್ರ), ಮಹಮ್ಮದ್ ಅನಿಫ್(ದ್ವಿ) ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಂದ್ಯಾವಳಿಯನ್ನು ಅರಣ್ಯ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎ.ಈಶ್ವರ್ ಆಯೋಜಿಸಿದರು.