

ಶಿವಮೊಗ್ಗ: ರಿಪ್ಪನ್‌ಪೇಟೆ ನಾಡಕಚೇರಿಯಲ್ಲಿ ಖಾತೆ ಬದಲಾವಣೆಗೆ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗ ಬುಧವಾರ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ಬಲೆಗೆ ಬಿದ್ದಿದ್ದಾರೆ. ಗ್ರಾಮ ಲೆಕ್ಕಿಗ ರಾಘವೇಂದ್ರ ಬಂಧಿತ ಆರೋಪಿ. ಖಾತೆ ಬದಲಾವಣೆಗೆ ಒಂದು ಸಾವಿರ ರೂ.ಗೆ ರಾಘವೇಂದ್ರ ಬೇಡಿಕೆ ಇಟ್ಟಿದ್ದು ಹೊಸನಗರ ತಾಲೂಕಿನ ಕೆರೆಹಳ್ಳಿ ಗ್ರಾಮದ ಜೋಸೆಫ್ ಚಾಕೋ ಎಂಬುವರು ದೂರು ನೀಡಿದ್ದರು. ನಾಡ ಕಚೇರಿಯಲ್ಲಿಯೇ ಒಂದು ಸಾವಿರ ರೂ. ಲಂಚ ಸ್ವೀಕರಿಸಿದ ವೇಳೆ ದಾಳಿ ನಡೆಸಿದ ಎಸಿಬಿ ಡಿವೈಎಸ್ಪಿ ಜೆ.ಲೋಕೇಶ್ ಮತ್ತು ಇನ್‌ಸ್ಪೆಕ್ಟರ್ ವೀರೇಂದ್ರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ಹಣ ಜಪ್ತಿ ಮಾಡಿದ್ದಾರೆ.