ದೊಡ್ಡಬಳ್ಳಾಪುರ ನಗರಸಭೆ ಕಾರ್ಯಾಲಯದ ಮೇಲೆ ಎಸಿಬಿ ದಾಳಿ, ಹಲವು ಅಧಿಕಾರಿಗಳು ನಾಪತ್ತೆ...

pic dodballapuara
Published on

ದೊಡ್ಡಬಳ್ಳಾಪುರ: ನಗರಸಭೆ ಕಾರ್ಯಾಲಯದ ಮೇಲೆ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಕಚೇರಿಯಲ್ಲಿ ಹಲವಾರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಸಭೆ ಕಾರ್ಯಾಲಯದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರು ಬಂದ ಹಿನ್ನೆಲೆ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ 25 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರೆವೆನ್ಯೂ, ಇಂಜಿನಿಯರ್, ಬಿಲ್ ಕಲೆಕ್ಷನ್ ವಿಭಾಗ ಸೇರಿದಂತೆ ನಾಲ್ಕು ಕಟ್ಟಡಗಳ ಮೇಲೆ ಏಕಾಕಾಲದಲ್ಲಿ ದಾಳಿಯಾಗಿದೆ. ದಾಳಿ ವೇಳೆ ನಗರಸಭೆಯ ಹಲವು ಅಧಿಕಾರಿಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಬಾಗಿಲು ಬಂದ್ ಮಾಡಿರುವ ಅಧಿಕಾರಿಗಳು, ಕಚೇರಿಯಲ್ಲಿರುವ ಹಲವಾರು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net