

ಮಾನ್ವಿ: ಶಿಕ್ಷಕರು ಪಾಠ ಮಾಡುವಾಗಿ ಕಪ್ಪು ಹಲಗೆಯ ಮೇಲೆ ಬರೆದು ವಿವರವಾಗಿ ತಿಳಿಸಬೇಕಾಗುತ್ತದೆ. ಕಪ್ಪು ಹಲಗೆಗೆ ಬಣ್ಣ ಹಚ್ಚಿದಾಗ ಅಕ್ಷರಗಳು ಸರಿಯಾಗಿ ಕಾಣಲು ಸಾಧ್ಯ ಎಂದು ಬಿಇಒ ಚಂದ್ರಶೇಖರ ದೊಡ್ಡಮನಿ ಹೇಳಿದರು.
ಕಲ್ಲೂರಿನ ಕೃಷ್ಣಾ ನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಪ್ಪು ಹಲಗೆಗೆ ಬಣ್ಣ ಹಚ್ಚು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಕಪ್ಪು ಹಲಗೆ ವಿದ್ಯಾರ್ಥಿಗಳ ಜೀವನದಲ್ಲಿ ಶೈಕ್ಷಣಿಕವಾಗಿ ಪ್ರಗತಿಯಾಗಲು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಶಾಲೆಗಳಲ್ಲಿ ಕಪ್ಪು ಹಲಗೆ ಉತ್ತಮವಾಗಿದ್ದರೆ ಕಲಿಕೆ ಸಹ ಉತ್ತಮವಾಗಿರುತ್ತದೆ ಎಂದರು. ಮುಖ್ಯ ಶಿಕ್ಷಕಿ ಶಿವಲಿಂಗಮ್ಮ, ಮಹಿಬೂಬ್, ರಿಯಾಜ್, ಹನುಮಂತಪ್ಪ, ಶಿಕ್ಷಕ ಮುದ್ದುರಂಗಪ್ಪ, ಎಸ್‌ಡಿಎಮ್‌ಸಿ ಅಧ್ಯಕ್ಷ ಗಂಗಪ್ಪ ಇತರರು ಇದ್ದರು.