

ಮೈಸೂರು: ಪರಿವರ್ತನ ರಂಗಸಮಾಜ, ಕಲಾಸುರುಚಿ ಮೈಸೂರು, ಕುತೂಹಲಿ ಹಾಗೂ ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ರಾಮಕೃಷ್ಣನಗರ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಿರುವ ಮೈಸೂರು ವಿಜ್ಞಾನ ನಾಟಕೋತ್ಸವದಲ್ಲಿ 21ರಂದು ಸಂಜೆ 6.30ಕ್ಕೆ ಧಾರವಾಡದ ಅಭಿನಯ ಭಾರತಿ ಕಲಾವಿದರಿಂದ ಎಸಿ ವರ್ಸಸ್ ಡಿಸಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
22ರಂದು ಪರಿವರ್ತನ ರಂಗ ಸಮಾಜ ತಂಡದವರು ಗೆಲಿಲಿಯೋಸ್ ಡಾಟರ್ ಇಂಗ್ಲಿಷ್ ನಾಟಕ ಹಾಗೂ 23ರಂದು ಅರಿವು ರಂಗ ತಂಡದವರಿಂದ ಹಸಿರೇ ಹೊನ್ನು ನಾಟಕ ಪ್ರದರ್ಶಿಸಲಿದ್ದಾರೆ.