ಬಡ ವೃದ್ಧೆಯ ಮನೆಗೆ ಎಸಿ ಭೇಟಿ, ನೆರವಿನ ಭರವಸೆ

ac
ವಾಸಿಸಲು ಸರಿಯಾದ ಮನೆ ಇಲ್ಲದೆ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಜಾಲ್ಸೂರು ಗ್ರಾಮದ ಕಲ್ಲಮುರದ ವೃದ್ಧೆ ಬೇಬಿ ಆಚಾರ್ತಿ ಮನೆಗೆ ಬುಧವಾರ ಭೇಟಿ ನೀಡಿದ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ ಆಕೆಯ ಜೀವನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
Published on

ಸುಳ್ಯ: ಸರಿಯಾದ ಮನೆ ಇಲ್ಲದೆ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಜಾಲ್ಸೂರು ಗ್ರಾಮದ ಕಲ್ಲಮುರದ ಮಹಿಳೆಯ ಮನೆಗೆ ಭೇಟಿ ನೀಡಿದ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ ಆಕೆಯ ಜೀವನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.

ಗುಡಿಸಲಿನಲ್ಲಿ ಕಳೆದ ನಲವತ್ತು ವರ್ಷಗಳಿಂದ ವಾಸಿಸುತ್ತಿರುವ ವೃದ್ಧೆ ಬೇಬಿ ಆಚಾರ್ತಿ ಮನೆಗೆ ಗುರುವಾರ ಭೇಟಿ ಔಷಧದ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಹೇಳಿದಾಗ, ಬೇಬಿ ಅವರು ತನಗೆ ಔಷಧ ಬೇಡ, ಬದಲಾಗಿ ಗುಡಿಸಲಿಗೆ ಟಾರ್ಪಾಲು, ಅಡುಗೆಗೆ ಅಕ್ಕಿ, ಗ್ಯಾಸ್ ಸಿಲಿಂಡರ್ ನೀಡುವಂತೆ ಮನವಿ ಮಾಡಿದ್ದಾರೆ. ಸ್ಪಂದಿಸಿದ ಜುಬಿನ್ ಮೊಹಪಾತ್ರ ಅವರು ಬೇಬಿ ಅವರ ಮನೆಗೆ ಟಾರ್ಪಾಲ್, ಅಕ್ಕಿ ಹಾಗೂ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಎಸಿ ಜತೆ ಅಧಿಕಾರಿಗಳು, ಕಾಲನಿ ನಿವಾಸಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net