ಸೊನ್ನ ಬ್ಯಾರೇಜ್‌ಗೆ ಎಸಿ ಭೇಟಿ

Sonna Barrage, AC visit, Ind, Flood,
ಇಂಡಿ ಸಮೀಪದ ಸೊನ್ನ ಬ್ಯಾರೇಜ್‌ಗೆ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಭೇಟಿ ನೀಡಿ ಪರಿಶೀಲಿಸಿದರು. ಸಂತೋಷ ಸಜ್ಜನ, ಲಕ್ಷ್ಮೀಕಾಂತ ಬಿರಾದಾರ, ಸಂತೋಷ ಪಾಟೀಲ ಇತರರಿದ್ದರು.
Published on

ಇಂಡಿ: ಸೊನ್ನ ಬ್ಯಾರೇಜ್‌ನ ಗೇಟ್‌ನ್ನು 2020ರಲ್ಲಿ ತೆರೆಯದಿದ್ದಾಗ ಉಂಟಾದ ಪ್ರವಾಹ ಪರಿಸ್ಥಿತಿ ಮರುಕಳಿಸದಂತೆ ಜಾಗ್ರತೆ ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.

ಸಮೀಪದ ಸೊನ್ನ ಬ್ಯಾರೇಜ್‌ಗೆ ಭೇಟಿ ನೀಡಿದಾಗ ಅಲ್ಲಿನ ಮುಖ್ಯ ಇಂಜಿನಿಯರ್ ಸಂತೋಷ ಸಜ್ಜನ ಅವರಿಗೆ ಮುನ್ನೆಚ್ಚರಿಕೆಯಾಗಿ ಸೂಚಿಸಿದರು.

ಇಂಜಿನಿಯರ್‌ಗಳಿಂದ ಬ್ಯಾರೇಜ್‌ನಲ್ಲಿರುವ ನೀರಿನ ಸಂಗ್ರಹ ಸಾಮರ್ಥ್ಯ, ಒಳಹರಿವು ಮತ್ತು ಹೊರಹರಿವು ಹಾಗೂ ಬ್ಯಾರೇಜ್‌ನ ದೈನಂದಿನ ಕಾರ್ಯನಿರ್ವಹಣೆ ಕುರಿತಾಗಿ ಸಮಗ್ರ ಮಾಹಿತಿ ಪಡೆದರು. ಎಲ್ಲ ಮಾಹಿತಿಯನ್ನು ಕ್ರಮಬದ್ಧವಾಗಿ ಹಾಗೂ ನಿರಂತರವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಬ್ಯಾರೇಜ್ ಇಂಜಿನಿಯರ್‌ಗಳಾದ ಲಕ್ಷ್ಮೀಕಾಂತ ಬಿರಾದಾರ, ಸಂತೋಷ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net