

ತೇರದಾಳ: ತಾಲೂಕಿನ ಸಸಾಲಟ್ಟಿ ಗ್ರಾಮದ ಅಜನಾಳ ಹಳ್ಳದ ಜಾಗದ ಸಮಸ್ಯೆ ಕುರಿತಂತೆ ಸ್ಥಳೀಯ ಬಸವರಾಜ ನಿಡೋಣಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಭೇಟಿ ನೀಡಿ ಪರಿಶೀಲಿಸಿದರು. ಖಾಸಗಿ ವ್ಯಕ್ತಿಗಳು ಹಳ್ಳದ ಒಂದು ಕಡೆ ಜಾಗವನ್ನು ಒತ್ತುವರಿ ಮಾಡಿದ್ದಾರೆ. ದೂರುದಾರನಿಗೆ ರಸ್ತೆ ಸಮಸ್ಯೆ ಆಗಿದಿಯೋ ಇಲ್ಲವೋ ಎನ್ನುವ ಕುರಿತು ಪರಿಶೀಲಿಸಿದರು.
ನಂತರ ಸಸಾಲಟ್ಟಿ ಗ್ರಾಮದ ಬಳಿ ಕುಡಚಿ-ಬಾಗಲಕೋಟೆ ರೈಲು ಮಾರ್ಗ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾಗುವ ಹೆಚ್ಚುವರಿ ಜಮೀನು ವೀಕ್ಷಣೆ ಮಾಡಿದರು.
ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಗ್ರಾಮ ಆಡಳಿತಾಧಿಕಾರಿಗಳಾದ ವಿರೇಶ ಗೋಕಾಕ, ಆರ್.ಎ. ಕಾಮತೆ ಇದ್ದರು.