ತರೀಕೆರೆಯ ಚಿಕ್ಕೆರೆಗೆ ಹೊಸ ರೂಪ

web 5
Published on

ತರೀಕೆರೆ: ಹಲವು ವರ್ಷಗಳ ಹಿಂದೆ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಚಿಕ್ಕೆರೆ ಈಗ ಮತ್ತೆ ಜೀವಕಳೆ ಪಡೆದಿದೆ ಎಂದು ಉಪವಿಭಾಗಾಧಿಕಾರಿ ರೇಣುಕಾಪ್ರಸಾದ್ ಹೇಳಿದರು.

ಪಟ್ಟಣದ ಐತಿಹಾಸಿಕ ಚಿಕ್ಕೆರೆಯನ್ನು ಸ್ವಚ್ಛಗೊಳಿಸಿದ ಹಿನ್ನೆಲೆಯಲ್ಲಿ ಪುರಸಭೆ, ವಿವಿಧ ಸಂಘ ಸಂಸ್ಥೆಗಳಿಂದ ಶುಕ್ರವಾರ ಏರ್ಪಡಿಸಿದ್ದ ಶಿವಗಂಗಾ ಪೂಜಾ ಕಾರ್ಯಕ್ರಮದಲ್ಲಿ ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಿಂದ ತಂದಿದ್ದ ಪುಣ್ಯಜಲವನ್ನು ಕೆರೆಗೆ ಸಮರ್ಪಿಸಿ ಮಾತನಾಡಿದರು.

ಸಮರ್ಪಕ ನಿರ್ವಹಣೆ ಇಲ್ಲದೆ ಅವನತಿ ಹಾದಿ ಹಿಡಿದಿದ್ದ ಚಿಕ್ಕೆರೆಗೆ ಪುರಸಭೆ ಮುಖ್ಯಾಧಿಕಾರಿ ದೂರದೃಷ್ಟಿ ಜತೆಗೆ ಪುರಸಭೆ ಸಿಬ್ಬಂದಿ ಮತ್ತು ಪೌರಕಾರ್ವಿುಕರು ತೋರಿದ ಶ್ರಮದಾನದ ಫಲವಾಗಿ ಹಳೇ ವೈಭವಕ್ಕೆ ಮರಳಿದೆ. ಕೆರೆ ಸಂರಕ್ಷಿಸುವ ಹೊಣೆ ಪ್ರತಿಯೊಬ್ಬರದು. ಇನ್ನುಮುಂದೆ ಕೆರೆಯಂಗಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸದ್ಯದಲ್ಲೇ ಜಿಲ್ಲಾಧಿಕಾರಿ ಮತ್ತು ತೋಟಗಾರಿಕೆ ಇಲಾಖೆ ಮುಖ್ಯಸ್ಥರೊಂದಿಗೆ ರ್ಚಚಿಸಿ ಐತಿಹಾಸಿಕ ಕೆರೆಗೆ ಹೊಸ ರೂಪ ಕೊಡಲಾಗುವುದು ಎಂದರು.

ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇಗುಲದಲ್ಲಿ ಸ್ಥಾಪಿಸಿದ್ದ ಗಂಗಾ, ಯಮುನಾ ಮತ್ತು ಸರಸ್ವತಿ ಪುಣ್ಯ ನದಿಗಳ ಪವಿತ್ರ ಜಲ ಕುಂಭಗಳ ಪೂಜೆಯೊಂದಿಗೆ ರುದ್ರಾಭಿಷೇಕ ನಡೆಯಿತು. ಕೆರೆ ಸ್ವಚ್ಛತಾ ಕಾರ್ಯ ಕೈಗೊಂಡ ಪೌರಕಾರ್ವಿುಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net