

ಬೈಲಹೊಂಗಲ: ಪಟ್ಟಣದ ಎಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಹರಳಯ್ಯ ಕಾಲನಿ ನಿವಾಸಿಗಳು ಸುಮಾರು 40 ವರ್ಷಗಳಿಂದ ವಾಸಿಸುತ್ತಿರುವ ನಮಗೆ ಹಕ್ಕುಪತ್ರ ವಿತರಿಸುವವರೆಗೆ ಮುಂಬರುವ ಎಲ್ಲ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಶುಕ್ರವಾರ ಅರೆಬೆತ್ತಲೆ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಅಂಬೇಡ್ಕರ್ ಯುವ ಸೇನೆ ಉಪಾಧ್ಯಕ್ಷ ಪರಶುರಾಮ ರಾಯಬಾಗ ಮಾತನಾಡಿ, ಶಾಸಕ ಮಹಾಂತೇಶ ಕೌಜಲಗಿ ಅವರು ಇಂದಿರಾ ನಗರದಲ್ಲಿರುವ ಮನೆಗಳಿಗೆ ಹಕ್ಕುಪತ್ರ ನೀಡಿದ್ದಾರೆ. ನಮಗೊಂದು ನ್ಯಾಯ ಅವರಿಗೊಂದು ನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜು ಅಗಾಸಿ, ಲಕ್ಷ್ಮಣ ಕಳಮಕರ, ಯಶವಂತ ರಾಯಬಾಗ, ನಾಗರಾಜ ಹಕಾತಿ, ನಾರಾಯಣ ಕಳಮಕರ, ದಿಲಾವರ್ ಅಕ್ಕಿ, ಅಲ್ಲಾಬಕ್ಷ ಫನಿಬಂದ್, ಭರಮಪ್ಪ ತೊರಗಲ್ಲ, ಉಮೇಶ ದೊಡಮನಿ, ಮಂಜು ರಾಯಬಾಗ, ಜಯರಾಬಿ ಅನ್ಸಾರಿ, ಖುರ್ಷಿದಬಾನು ಸೈಯ್ಯದ್, ಕಮಾಲಬಿ ಸೈಯ್ಯದ್, ಯಲ್ಲವ್ವ ಪಾಟೀಲ, ಯಾಸ್ಮಿನ್ ಖಾನ್, ರೂಪಾ ದೊಡಮನಿ, ರೇಷ್ಮಾ ಮುಗಟಖಾನ್, ಈರಮ್ಮ ದಳವಾಯಿ ಇತರರಿದ್ದರು.