ಸಕ್ಕರೆ ಕಾರ್ಖಾನೆಯಲ್ಲಿ ಎಸಿ ಸ್ಫೋಟ: ಶಿವಮೊಗ್ಗ ಮೂಲದ ಅಧಿಕಾರಿ ಸಾವು

crime
Published on

ಮದ್ದೂರು: ಏರ್ ಕಂಡೀಷನರ್ ಸ್ಫೋಟಗೊಂಡು ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಕೊಪ್ಪದ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆ ನಡೆದಿದೆ.

ಶಿವಮೊಗ್ಗ ಮೂಲದ ಶ್ರೀಧರ (52) ಮೃತಪಟ್ಟ ಅಧಿಕಾರಿ. ಕಾರ್ಖಾನೆಯ ವಿದ್ಯುತ್ ನಿರ್ವಹಣೆ ವಿಭಾಗದ ಡೆಪ್ಯೂಟಿ ಮೇನೇಜರ್ ಆಗಿದ್ದ ಶ್ರೀಧರ ಕಂಟ್ರೋಲ್ ರೂಂಗೆ ತೆರಳಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಏರ್ ಕಂಡೀಷನರ್ ಸ್ಫೋಟಗೊಂಡು ರಾಸಾಯನಿಕ ಸೋರಿಕೆಯಾದ ಕಾರಣ ಶ್ರೀಧರ ತೀವ್ರ ಅಸ್ವಸ್ಥಗೊಂಡರು.

ತಕ್ಷಣವೇ ಮಂಡ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದರು. ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net