73 ಲೀಟರ್ ರಕ್ತ ದಾನಗೈದ ಪೊಲೀಸ್

oppo_2
oppo_2
Published on

ಕಲಬುರಗಿ: ಪೊಲೀಸರೆಂದರೆ ನಕಾರಾತ್ಮಕ ಎಂಬ ದೃಷ್ಟಿಗೆ ತದ್ವಿರುದ್ಧವಾಗಿರುವ ಹಾವೇರಿ ಜಿಲ್ಲೆಯ ಹಾನಗಲ್‌ನ ಪೊಲೀಸ್ ಪೇದೆ ಕರಬಸಪ್ಪ ಗೊಂದಿ ಅವರು ೧೪೬ ಬಾರಿ (೭೩ ಲೀಟರ್) ರಕ್ತ ದಾನ ಮಾಡುವ ಮೂಲಕ ರಕ್ತಸೈನಿಕ ಪಟ್ಟ ಪಡೆದುಕೊಂಡಿದ್ದು, ಇಂತಹ ಯುವ ಸಾಧಕನಿಗೆ ಎಬಿವಿಪಿ ರಾಜ್ಯ ಸಮ್ಮೇಳನದಲ್ಲಿ ಸನ್ಮಾನಿಸಿ, ಇತರರಿಗೆ ಪ್ರೇರಣೆ ನೀಡಲಾಯಿತು.

ನಗರದ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿAಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ನಡೆಯುತ್ತಿರುವ ಎಬಿವಿಪಿ ಉತ್ತರ ಪ್ರಾಂತ ರಾಜ್ಯಮಟ್ಟದ ೪೪ನೇ ಸಮ್ಮೇಳನದಲ್ಲಿ ಭಾನುವಾರ ಹಮ್ಮಿಕೊಂಡ ಯುವ ಸಾಧಕರಿಗೆ ಸನ್ಮಾನ ಸಮಾರಂಭದ ವೇದಿಕೆಯೂ ರಕ್ತದಾನ ಮಹತ್ವ, ದಾನದಿಂದ ಆಗುವ ಲಾಭಗಳ ಜಾಗೃತಿ ಮೂಡಿಸುವ ವೇದಿಕೆಯಾಗಿ ಮಾರ್ಪಟ್ಟಿತು.

ವೇದಿಕೆಯಲ್ಲಿ ರಕ್ತ ಸೈನಿಕ ಕರಿಬಸಪ್ಪ ಗೊಂದಿ ಅವರ ಜೀವನ ಸಾಧನೆಯ ಚಿತ್ರಣವೂ ರಕ್ತದಾನಿಗಳಲ್ಲಿ ಆತ್ಮವಿಶ್ವಾಸ ತುಂಬುವ ಜತೆಗೆ ನವ ರಕ್ತ ಸೈನಿಕರಿಗೆ (ದಾನಿಗಳಿಗೆ) ಪ್ರೇರಣೆ ನೀಡಿತು.

ಹಾವೇರಿ ಜಿಲ್ಲೆಯ ಅಕ್ಕಿ ಆಲೂರು ಗ್ರಾಮದ ಕರಿಬಸಪ್ಪ ಗೊಂದಿ ಜನಿಸಿದ್ದು, ಪ್ರಸ್ತುತ ಹಾನಗಲ್‌ದಲ್ಲಿ ಪೊಲೀಸ್ ಪೇದೆಯಾಗಿದ್ದಾರೆ. ಕರ್ತವ್ಯದ ಜತೆಗೆ ಸಾಮಾಜಿಕ ಕಳಕಳಿ ಹೊಂದಿದ್ದು, ವಿಶೇಷವಾಗಿ ರಕ್ತದಾನದಲ್ಲಿ ಸ್ವತಃ ತಾವೇ ದಾನಿಗಳಾಗಿ, ಇತರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಗ್ರಾಮ ಅಕ್ಕಿ ಆಲೂರಿನಲ್ಲಿ ೧೨೦೦ಕ್ಕಿಂತ ಹೆಚ್ಚು ರಕ್ತದಾನಿಗಳಿದ್ದು, ಇಲ್ಲಿ ರಕ್ತ ಹೀನತೆ, ಕೊರತೆ, ತಲೆಸಿಮಿಯಾ ರೋಗಕ್ಕೆ ಈಡಾದವರಿಗೆ ಈ ಗ್ರಾಮದಲ್ಲಿ ರಕ್ತದಾನ ಮಾಡಿ, ಜೀವ ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಗ್ರಾಮಸ್ಥರು, ವಿವಿಧೆಡೆಯ ಸಮಾನ ಮನಸ್ಕರು ಸ್ನೇಹ ಮೈತ್ರಿ ಬ್ಲಡ್ ಆರ್ಮಿ ತಂಡ ಮಾಡಿ, ವ್ಯವಸ್ಥಿತವಾಗಿ ರಕ್ತದಾನ ಮಾಡಲಾಗುತ್ತಿದೆ ಎಂಬುದನ್ನು ಕಿರುಚಿತ್ರ ತಿಳಿಸಿದರು.

ಪೊಲೀಸರ ಬಳಿ ರಕ್ತ ಕೇಳ್ತಾರೆ: ಕರಿಬಸಪ್ಪ ಗೊಂದಿ ಅವರ ಪ್ರೇರಣೆಯಿಂದ ಹಾವೇರಿ ಜಿಲ್ಲೆಯ ರಕ್ತದ ಕೊರತೆ ಕಂಡು ಬಂದರೆ ಪೊಲೀಸ್ ಠಾಣೆಗೆ ರಕ್ತ ಸಿಗುತ್ತಾ ಸರ್ ಎಂದು ಕೇಳುವ ಮಟ್ಟಿಗೆ ಸ್ಥಿತಿ ಬಂದಿದೆ. ೧೪೬ ಬಾರಿ ರಕ್ತದಾನ ಮಾಡಿದ್ದು, ಲೆಕ್ಕಾಚಾರದ ಪ್ರಕಾರ ಇದುವರೆಗೆ ೭೩ ಲೀಟರ್ ರಕ್ತದಾನ ಮಾಡಿz್ದೆÃನೆ. ಆರೋಗ್ಯವಂತ ಹಾವೇರಿ ಜಿಲ್ಲೆ ಮಾಡುವ ಯೋಜನೆ ಇದೆ ಎನ್ನುತ್ತಾರೆ ಪೊಲೀಸ್ ಕರಿಬಸಪ್ಪ ಗೊಂದಿ.

ಸನ್ಮಾನ: ೧೪೬ ಬಾರಿ ರಕ್ತದಾನ ಮಾಡಿದ ಹಾನಗಲದ ಪೊಲೀಸ್ ಇಲಾಖೆ ಸಿಬ್ಬಂದಿ ರಕ್ತ ಸೈನಿಕ ಕರಿಬಸಪ್ಪ ಗೊಂದಿ ಅವರನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ಗುವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಮಾತನಾಡಿ, ಸಮಾಜದಲ್ಲಿ ಸೇವಾ ಮನೋಭಾವದ ಯುವಕರ ಸಂಖ್ಯೆ ಹೆಚ್ಚಬೇಕು. ರಕ್ತದಾನವೇ ಅಲ್ಲ ನಾವು ವಾಸಿಸುವ ಪರಿಸರದಲ್ಲಿ ಸೇವೆಗೆ ಇರುವ ಅವಕಾಶಗಳನ್ನು ಅರಿತು ಕಾರ್ಯಚಟುವಟಿಕೆಗಳನ್ನು ಮಾಡಬೇಕು. ರಕ್ತದಾನದ ಪ್ರೇರಣೆ ಎಲ್ಲರಿಗೂ ದೊರೆಯಲಿ. ಶಿಕ್ಷಣ ಎಂದರೆ ಏನೂ ಎಂಬುದಕ್ಕೆ ಬಹುತೇಕರಲ್ಲಿ ಸ್ಪಷ್ಟನೇ ಇಲ್ಲ. ಕಾಲ ಕಾಲಕ್ಕೆ ಅದರ ಧ್ಯೇಯೋಧ್ಯೇಶ ಬದಲಾಗುತ್ತಿವೆ. ಉದ್ಯೋಗಕ್ಕಾಗಿ ಶಿಕ್ಷಣವಲ್ಲ, ಬದುಕಿಗಾಗಿ. ಪ್ರಸ್ತುತ ಶಿಕ್ಷಣದ ಪರಿಕಲ್ಪನೆ ಬದಲಾಗಿದೆ ಎಂದರು.

ಸಹಾಯಕ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲು ಸಾಧಕರ ಪರಿಚಯ ತಿಳಿಸಿದರು. ಉತ್ತರ ಪ್ರಾಂತ ರಾಜ್ಯಾಧ್ಯಕ್ಷ ಡಾ.ಆನಂದ ಹೊಸುರ ಸ್ವಾಗತಿಸಿದರು. ಕಾರ್ಯದರ್ಶಿ ಸಚಿನ ಕುಳಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net