ಎನ್‌ಇಪಿ ರದ್ದತಿ ನಿಲುವು ಖಂಡನೀಯ

ABVP
Published on

ಶಿರಹಟ್ಟಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶುಕ್ರವಾರ ಶಿರಹಟ್ಟಿಯಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಎಸ್.ಎಫ್. ಭಜಂತ್ರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಷೇಕ ದೊಡ್ಡಮನಿ ಮಾತನಾಡಿ, ಸ್ವತಂತ್ರ ಭಾರತದ ಆರಂಭದಿಂದ ಮುಂದುವರಿದು ಬಂದಿರುವ ಜಿಡ್ಡುಗಟ್ಟಿದ ಶಿಕ್ಷಣ ಪದ್ಧತಿ ಬಗ್ಗೆ ಕೇಂದ್ರ ಸರ್ಕಾರ ಚಿಂತನ, ಮಂಥನ ನಡೆಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿರುವುದು ಸ್ವಾಗತಾರ್ಹ ಸಂಗತಿ. ಇದನ್ನು 2020-21 ರಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿರುವ ಹೆಗ್ಗಳಿಕೆ ಕರ್ನಾಟಕ್ಕದ್ದಾಗಿದೆ. ಆದರೆ, ರಾಜ್ಯ ಸರ್ಕಾರ ಪ್ರಸ್ತುತ ಹೊಸ ಶಿಕ್ಷಣ ನೀತಿಯ ಬಗ್ಗೆ ಅಪಸ್ವರ ಎತ್ತಿ ಅದನ್ನು ರದ್ದು ಮಾಡಲು ಮುಂದಾಗಿರುವ ಧೋರಣೆ ವಿದ್ಯಾರ್ಥಿಗಳ ಹಿತಕ್ಕೆ ಮಾರಕವಾದುದು’ ಎಂದರು.

ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಇಪಿ ರದ್ದತಿ ಬಗ್ಗೆ ಭರವಸೆ ನೀಡಿದ್ದೇವೆ ಎಂಬ ಸಬೂಬು ಮೂಲಕ ರಾಜ್ಯ ಸರ್ಕಾರ ಸದರಿ ಶಿಕ್ಷಣ ನೀತಿಯನ್ನು ರದ್ದು ಮಾಡಲು ಹೊರಟಿರುವ ಕ್ರಮ ಸರಿಯಲ್ಲ ಎಂದರು.

ದರ್ಶನ ಅಕ್ಕಿ, ಚೇತನ ಎಲಿಗಾರ, ಪ್ರಜ್ವಲ ವಾಲಿಕಾರ, ಚಂದ್ರು ಕುಂದಗೋಳ, ಪ್ರದೀಪ ಶೆಟ್ಟರ, ಶರಣಪ್ಪ ಶಿವನಗೌಡ್ರ, ಅನಿಲ ಜೋಶಿ, ಬೀರಪ್ಪ ಗೂಳಪ್ಪನವರ, ಕಾರ್ತಿಕ ಅಕ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net